ಬಹಮನಿ ಸಾಮ್ರಾಜ್ಯದ ಸಂಸ್ಥಾಪನಾ ದಿನ ಆಚರಣೆ

ಕಲಬುರಗಿ: ಆ.3:ಬಹಮನಿ ಫೌಂಡೇಶನ್ ಸಂಘವೂ ಗುರುವಾರ ಮೊದಲ ಸುಲ್ತಾನ್ ಅಲಾವುದ್ದೀನ್ ಹಸನ್ ಬಹಮಾನ್ ಶಾ ಅವರ ಸಮಾಧಿಗೆ ಗೌರವ ಸಲ್ಲಿಸುವ ಮೂಲಕ ಬಹಮನಿ ಸಾಮ್ರಾಜ್ಯದ ಸಂಸ್ಥಾಪನಾ ದಿನವನ್ನು ಆಯೋಜಿಸಿತ್ತು.
ಹಸನ್ ಬಹಮಾನ್ μÁ ಅವರು ಆಗಸ್ಟ್ 3, 1347 ರಂದು ರಾಜವಂಶವನ್ನು ಸ್ಥಾಪಿಸಿದರು, ನಂತರ ಅವರು ವಿಶಾಲವಾದ ಸಾಮ್ರಾಜ್ಯವನ್ನು ನಿರ್ಮಿಸಿದರು. ರಾಜವಂಶವು 180 ವರ್ಷಗಳ ಕಾಲ ಆಳಿತು.
ಅನೇಕ ಸಂಶೋಧಕರು, ಇತಿಹಾಸಕಾರರು, ಕಲಾವಿದರು, ಸಮಾಜ ಸೇವಕರು ಮತ್ತು ಬುದ್ಧಿಜೀವಿಗಳು ಬಹಮನಿ ಸುಲ್ತಾನರ ಕೊಡುಗೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಬಹಮನಿ ಫೌಂಡೇಶನ್ ಅಧ್ಯಕ್ಷ ಖಾಜಿ ರಿಜ್ವಾನ್ ಉರ್ ರಹಮಾನ್ ಸಿದ್ದಿಕಿ ಮಾತನಾಡಿ, 25 ವರ್ಷಗಳಿಂದ ಬಹಮನಿ ಸಾಮ್ರಾಜ್ಯದ ಸಂಸ್ಥಾಪನಾ ದಿನವನ್ನು ಆಯೋಜಿಸಲಾಗಿದೆ. ಶೇಕ್ ಸಿರಾಜುದ್ದೀನ್ ಜುನೈದಿ ದರ್ಗಾದ ಸಿರಾಜ್ ಬಾಬಾ ಸಜ್ಜಾದ ನಶೀನ್ ಸುಲ್ತಾನರ ಸಮಾಧಿಯಲ್ಲಿ ಸೂರಾ ಫತೇಹಾ ಪಠಿಸಿದರು. ಕಲಾವಿದ ಮತ್ತು ಸಂಶೋಧಕ ಮೊಹಮ್ಮದ್ ಅಯಾಜುದ್ದೀನ್ ಪಟೇಲ್ ಬಹಮನಿಯ ಸಂಕ್ಷಿಪ್ತ ಇತಿಹಾಸವನ್ನು ವಿವರಿಸಿದರು.
ಖ್ಯಾತ ಉರ್ದು ಸಾಹಿತಿ ಹಮೀದ್ ಅಕ್ಮಲ್, ಅಜೀಜುಲ್ಲಾ ಸರ್ಮಸ್ತ್, ಡಾ.ಖಾಜಿ ಹಮೀದ್ ಫೈಸಲ್ ಸಿದ್ದಿಕಿ, ವಕೀಲ ಜಬ್ಬಾರ್ ಗೋಲಾ, ಕಲಾವಿದ ರೆಹಮಾನ್ ಪಟೇಲ್, ಶಾಹೆದ್ ಪಾμÁ, ಇತಿಹಾಸಕಾರ ಮೊಹಮ್ಮದ್ ಇಸ್ಮಾಯಿಲ್, ಸಮಾಜ ಸೇವಕ ಮಹಮ್ಮದ್ ಮೆರಾಜುದ್ದೀನ್, ಸಾಜಿದ್ ಅಲಿ ರಂಜೋಲ್ವಿ, ಬಾಬಾ ಫಕುರುದ್ದೀನ್, ರೇವಣಸಿದ್ದಪ್ಪ ಹೊಟ್ಟಿ, ಅಲಾವುದ್ದೀನ್ ಅಕ್ಬರ್, ಅಬ್ದುಲ್ಲಾ ಖಾನ್ ಉಪಸ್ಥಿತರಿದ್ದರು.