ಬಸ್ ಹತ್ತುವ ವೇಳೆ 40 ಗ್ರಾಂ.ಮಂಗಳಸೂತ್ರ ಮಂಗಮಾಯ !

ಕಲಬುರಗಿ,ಏ.3-ಬಸ್ ಹತ್ತುವ ವೇಳೆ ವ್ಯಾನಿಟಿ ಬ್ಯಾಗ್‍ನಲ್ಲಿ ಇಟ್ಟಿದ್ದ 2.20 ಲಕ್ಷ ರೂ.ಮೌಲ್ಯದ 40 ಗ್ರಾಂ.ಬಂಗಾರದ ಮಂಗಳಸೂತ್ರ ಕಳವಾದ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ಭೀಮಬಾಯಿ ಪ್ರಶಾಂತ ಮಡ್ಡಿತೋಟ (26) ಎಂಬುವವರೆ 40 ಗ್ರಾಂ.ಬಂಗಾರದ ಮಂಗಳಸೂತ್ರ ಕಳೆದುಕೊಂಡು ಕಂಗಾಲಾಗಿದ್ದಾರೆ.
ಸಂಬಂಧಿಕರ ಮದುವೆ ಸಮಾರಂಭಕ್ಕೆಂದು ಕಲಬುರಗಿಗೆ ಬಂದಿದ್ದ ಇವರು ಮದುವೆ ಸಮಾರಂಭ ಮುಗಿಸಿಕೊಮಡು ಮರಳಿ ಊರಿಗೆ ಹೋಗಲು ನಿಂಬಾಳ ಗ್ರಾಮದ ಮುಕ್ಕಾಮ್ ಬಸ್ ಹತ್ತಿದ್ದಾರೆ. ಸಣ್ಣ ಪಾಕೇಟ್‍ನಲ್ಲಿ ಹಾಕಿ ವ್ಯಾನಿಟಿ ಬ್ಯಾಗ್‍ನಲ್ಲಿ ಇಟ್ಟಿದ್ದ ಮಂಗಳಸೂತ್ರವನ್ನು ಈ ವೇಳೆ ಕಳ್ಳರು ಕದ್ದಿದ್ದಾರೆ ಎಂದು ಅವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.