ಬಸ್ ಹತ್ತುವಾಗ 44 ಗ್ರಾಂ.ಬಂಗಾರದ ತಾಳಿ ಸರ ಕಳವು

ಕಲಬುರಗಿ,ಏ.17-ಮಹಿಳೆಯೊಬ್ಬರು ಬಸ್ ಹತ್ತುವಾಗ 2.20 ಲಕ್ಷ ರೂ.ಮೌಲ್ಯದ 44 ಗ್ರಾಂ.ಬಂಗಾರದ ತಾಳಿ ಸರ ಕಳೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಬೀದರ್ ಜಿಲ್ಲೆಯ ಕೋಳಾರ (ಕೆ) ಗ್ರಾಮದ ಈರಮ್ಮ ಶರಣಯ್ಯ ಹಿರೇಮಠ (35) ಎಂಬುವವರೆ ಬಂಗಾರದ ತಾಳಿ ಸರ ಕಳೆದುಕೊಂಡು ಕಂಗಾಲಾಗಿದ್ದಾರೆ.
ಈರಮ್ಮ ಅವರು ತವರು ಮನೆಯಾದ ಯಳಸಂಗಿ ಗ್ರಾಮಕ್ಕೆ ಹೋಗಲು ಮಗನೊಂದಿಗೆ ಆಳಂದ ಚೆಕ್ ಪೋಸ್ಟ್ ಹತ್ತಿರ ಬಸ್ಸಿಗಾಗಿ ಕಾಯುತ್ತ ನಿಂತಿದ್ದಾರೆ. ಈ ವೇಳೆ ಲಗೇಜ್ ಬ್ಯಾಗ್‍ನ್ನು ಮಗನ ಕೈಯಲ್ಲಿ ಕೊಟ್ಟಿದ್ದಾರೆ. ಯಳಸಂಗಿ ಗ್ರಾಮಕ್ಕೆ ಹೋಗಲು ಬಸ್ ಹತ್ತುತ್ತಿದ್ದ ವೇಳೆ ಕಳ್ಳರು ಇವರ ಲಗೇಜ್ ಬ್ಯಾಗ್‍ನಲ್ಲಿದ್ದ 44 ಗ್ರಾಂ.ಬಂಗಾರದ ತಾಳಿ ಸರವನ್ನು ಕಳವು ಮಾಡಿದ್ದಾರೆ. ಈ ಸಂಬಂಧ ಈರಮ್ಮ ಹಿರೇಮಠ ಅವರು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.