ಬಸ್ ಹತ್ತುವಾಗ ವ್ಯಾನಿಟಿ ಬ್ಯಾಗ್‍ನಲ್ಲಿದ್ದ ಬಂಗಾರದ ಲಾಕೇಟ್ ಕಳವು: ಇಬ್ಬರು ಕಳ್ಳಿಯರ ಬಂಧನ

ಕಲಬುರಗಿ,ಮೇ.19-ಬಸ್ಸಿನಲ್ಲಿ ಕಳವು ಮಾಡುತ್ತಿದ್ದ ಇಬ್ಬರು ಕಳ್ಳಿಯರನ್ನು ಸಬ್ ಅರ್ಬನ್ ಪೊಲೀಸರು ಬಂಧಿಸಿದ್ದಾರೆ.
ಬಾಪು ನಗರದ ರುಕ್ಸಾನ ಅಲಿಯಾಸ್ ಕರಿನಾ ಗಂಡ ಧನವಾನ ಪಾಟೀಲ (20) ಮತ್ತು ಲಕ್ಷ್ಮೀ ಗಂಡ ಭೀಮಾ ಪಾಟೀಲ (28) ಎಂಬುವವರನ್ನು ಬಂಧಿಸಿ ಎರಡುವರೆ ತೊಲೆಯ ಎರಡು ಎಳೆಯ ಬಂಗಾರದ ಬಂಗಾರದ ಸರವನ್ನು ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಭವಾನಿ ನಗರದ ಸಂಗೀತಾ ಸಿದ್ದಯ್ಯ ಸ್ವಾಮಿ ಎಂಬುವವರು ತನ್ನ ತಮ್ಮನ ಗೃಹ ಪ್ರವೇಶದ ಸಮಾರಂಭಕ್ಕೆ ಹೋಗಬೇಕೆಂದು ವ್ಯಾನಿಟಿ ಬ್ಯಾಗಿನಲ್ಲಿ 1.25 ಲಕ್ಷ ರೂ.ಮೌಲ್ಯದ 25 ಗ್ರಾಂ.ಬಂಗಾರದ ಲಾಕೆಟ್ ಇಟ್ಟುಕೊಂಡು ಹುಮನಾಬಾದ್ ರಿಂಗ್ ರೋಡ್‍ನಿಂದ ಬಸ್ ಹತ್ತುವಾಗ ವ್ಯಾನಿಟಿ ಬ್ಯಾಗ್‍ನಲ್ಲಿದ್ದ ಲಾಕೆಟ್ ಕಳವಾಗಿತ್ತು. ಈ ಸಂಬಂಧ ಅವರು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ಸಂಬಂಧ ನಗರ ಉಪ ಪೊಲೀಸ್ ಆಯುಕ್ತರಾದ ಅಡ್ಡೂರು ಶ್ರೀನಿವಾಸಲು, ಐ.ಎ.ಚಂದ್ರಪ್ಪ, ಸಬ್ ಅರ್ಬನ್ ಉಪ ವಿಭಾಗದ ಎಸಿಪಿ ಗೀತಾ ಬೇನಾಳ ಅವರ ನೇತೃತ್ವದಲ್ಲಿ ಪಿಎಸ್‍ಐ ದಯಾನಂದ, ಮುಖ್ಯಪೇದೆ ಅಶೋಕ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ಪ್ರಕಾಶ, ನಾಗೇಂದ್ರ, ಪ್ರಶಾಂತ ಬಸಮ್ಮ, ಜಯಶ್ರೀ, ಮೇಘಾ ರೆಡ್ಡಿ, ವಿಠ್ಠಾಬಾಯಿ, ಬೌರಮ್ಮ, ರಾಜಶ್ರೀ ಅವರನ್ನೊಳಗೊಂಡ ಪ್ರತ್ಯೇಕ ತಂಡ ರಚಿಸಲಾಗಿತ್ತು.
ಈ ಪ್ರತ್ಯೇಕ ತಂಡಗಳು ತನಿಖೆ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಚೇತನ್ ಆರ್.ಅವರು ಶ್ಲಾಘಿಸಿದ್ದಾರೆ.