ಬಸ್ ಸೌಲಭ್ಯ ನೀಡಲು ಮನವಿ

ಜೇವರ್ಗಿ :ಜು.8:ಗ್ರಾಮ ಸಮಿತಿ ಯಾಳವಾರ ನೇತೃತ್ವದಲ್ಲಿ ಜೀವರ್ಗಿ ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಗ್ರಾಮಗಳಿಗೆ ಅಥವಾ ಜೀವರ್ಗಿ ಶಾಲಾ ಕಾಲೇಜು ಹೋಗಲು ಬಸ್ಸಿನ ವ್ಯವಸ್ಥೆ ಇಲ್ಲದೆ ಮಕ್ಕಳಿಗೆ ಸಾರ್ವಜನಿಕರಿಗೆ ತುಂಬ ತೊಂದರೆ ಅನುಭವಿಸ್ತಾ ಇದ್ದಾರೆ ಸುಮಾರು ಮಕ್ಕಳು ಬಸ್ಸಿನ ಬಾಗಿಲು ಮೇಲೆ ಅಥವಾ ಬಸ್ಸಿನ ಮೇಲುಗಡೆ ಕುಳಿತುಕೊಳ್ಳುವುದು ನಿಲ್ಲುವದು ಮಾಡುತ್ತಿರುವುದು ಕಂಡು ಬರುತ್ತದೆ ಒಂದು ವೇಳೆ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಅಧಿಕಾರಿಗಳು ಹಾಗೂ ಸರ್ಕಾರ ಶಾಸಕರು ಜವಾಬ್ದಾರಿ ಪಡಬೇಕಾಗುತ್ತದೆ ಆದ್ದರಿಂದ ಕೂಡಲೇ ಸರಿಯಾಗಿ ಸಮಯಕ್ಕೆ ಬಸ್ಸು ಇಲ್ಲದರಿಂದ ಮಕ್ಕಳು ಶಾಲಾ ಕಾಲೇಜು ಬಿಡುವಂತಹ ಸ್ಥಿತಿ ಕೂಡ ತಾಲೂಕಿನಲ್ಲಿ ನಿರ್ಮಾಣವಾಗಿದೆ ಅದಕ್ಕೆ ಇಂದು ಮಾನ್ಯ ಘಟಕ ವ್ಯವಸ್ಥಾಪಕರು ಕ ಕ ರ ಸಾ ಸಂಸ್ಥೆ ಜೇವರ್ಗಿ ಹಾಗೂ ಮೇಲಧಿಕಾರಿಗಲಿಗೆ ಮನವಿಯ ಮುಖಾಂತರ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಸರಿಯಾಗಿ ಸಮಯಕ್ಕೆ ಬಸ್ಸಿನ ವ್ಯವಸ್ಥೆ ಮಾಡುವುದು ಮತ್ತು ಬಸ್ಸುಗಳು ಹೆಚ್ಚು ಮಾಡಿ ಸಾರ್ವಜನಿಕರಗೆ ವಿದ್ಯಾರ್ಥಿಗಳ್ಳಿಗೆ ಸಮಸ್ಯೆ ಪರಿಹರಿಸುವ ಕೆಲಸ ಮಾಡಿ ಎಂದು ಎಚ್ಚರಿಕೆ ಕೊಟ್ಟಿದ್ದೇವೆ ಒಂದು ವೇಳೆ ಹಾಗೆ ಮುಂದುವರೆದರೆ ಡಿಪುಗೆ ಮುತ್ತಿಗೆ ಹಾಕಿ ಹೊರಗೆ ಬಸ್ ಬಿಡದೆ ಉಗ್ರ ಸ್ವರೂಪದ ಹೋರಾಟ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ಎಚ್ಚರಿಕೆ ಕೊಡಲಾಯಿತು ಈ ಸಂದರ್ಭದಲ್ಲಿ ಆದರ್ಶ ಗ್ರಾಮ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಪಟೇಲ್ ರಾಜ ಪಟೇಲ್ ಪೆÇಲೀಸ್ ಪಾಟೀಲ್ ಬಿ ಎಚ್ ಮಾದಿ ಪಾಟೀಲ್ ನಾಗರಾಜ್ ಸಜ್ಜನ್ ಅಜೀಸ್ ಪಟೇಲ್ ದೇವು ದೊರೆ ವಜೀರ್ ಪಟೇಲ್ ಫತ್ರು ಪಟೇಲ್ ಹಾಜರಿದ್ದರು