ಬಸ್ ಸೌಲಭ್ಯ ಕಲ್ಪಿಸಲು ಮನವಿ

ಆಲಮೇಲ:ಜು.3:ನಾಲ್ಕು ದಿನದಲ್ಲಿ ಪಟ್ಟಣಕ್ಕೆ ರಾತ್ರಿ ವೇಳೆ ಬಸ್ ಸೌಲಭ್ಯ ಕಲ್ಪಿಸಬೇಕು, ಇಲ್ಲದಿದ್ದರೆ ಬಸ್ ನಿಲ್ದಾಣ ಆವರಣದಲ್ಲೇ ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವದು ಎಂದು ಆಗ್ರಹಿಸಿ ಪಟ್ಟಣದ ಡಾ,ಭೀಮರಾವ ಅಂಬೇಡ್ಕರ ಯುವಕ ಸಂಘ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಾಲೂಕ ಘಟಕದ ನೇತ್ರತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶನಿವಾರ ತಹಸೀಲ್ದಾರ ಸುರೇಶ್ ಚಾವಲರ್ ಇವರಿಗೆ ಮನವಿ ಸಲ್ಲಿಸಿದರು.
£ಬಳಿಕ ಮುಖಂಡ ಹರೀಶ್ ಯಂಟಮನ ಮಾತನಾಡಿ ಆಲಮೇಲ ತಾಲೂಕ ಕೇಂದ್ರವಾಗಿ ಎರಡು ವರ್ಷಗಳೇ ಕಳೆದರೂ ಕೂಡಾ ಇನ್ನೂ ಪಟ್ಟಣವು ರಾತ್ರಿ ವೇಳೆ ಬಸ್‍ಗಳ ಸೌಲಭ್ಯದಿಂದ ವಂಚಿತ ವಾಗಿದೆ. 43 ಹಳ್ಳಿಗಳ ಕೇಂದ್ರ ಸ್ಥಾನವಾಗಿರುವ ಆಲಮೇಲ ಪಟ್ಟಣಕ್ಕೆ ದಿನನಿತ್ಯ ಸಾವಿರಾರೂ ಪ್ರಯಾಣಿಕರು ಸರ್ಕಾರಿ ನೌಕರರು, ವಿವಿಧ ಹಳ್ಳಿಗಳಿಂದ ಶಾಲಾ ಮಕ್ಕಳು ಹಾಗೂ ವ್ಯಾಪಾರಸ್ಥರು ತಮ್ಮ ವ್ಯಾಪಾರ ವಹಿವಾಟಿಗೆ ಇದರ ಜೊತೆಗೆ ವಿವಿಧ ಹಳ್ಳಿಗಳಿಂದ ಶಾಲಾ ಮಕ್ಕಳು ಕೂಡಾ ವಿದ್ಯಾಭ್ಯಾಸಕ್ಕೆ ಪಟ್ಟಣಕ್ಕೆ ಆಗಮಿಸುತ್ತಿರುತ್ತಾರೆ. ಇವರಿಗೆ ರಾತ್ರಿ ತಮ್ಮ ಗ್ರಾಮಗಳಿಗೆ ತೆರಳಬೇಕಾದರೆ ಬಸ್‍ಗಳ ಸೌಲಭ್ಯಗಳು ಇಲ್ಲದೆ ಶಾಲಾ ಮಕ್ಕಳು ಹಾಗೂ ವ್ಯಾಪಾರಸ್ಥರು ಹಾಗೂ ಸರ್ಕಾರಿ ನೌಕರರು ಸಾರ್ವಜನಿಕರು ಆಲಮೇಲ ಪಟ್ಟಣಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿ ತನಕ್ಕೆ ಸದ್ಯ ಪಟ್ಟಣದಲ್ಲಿನ ವ್ಯಾಪಾರ ವಹಿವಾಟುಗಳು ಕುಂಠಿತವಾಗಿ ಪಟ್ಟಣ ಬೀಕೋ ಎನ್ನುತ್ತಿದೆ. ನಾಲ್ಕು ದಿನದಲ್ಲಿ ಸಾರಿಗೆ ಅಧಿಕಾರಿಗಳು ರಾತ್ರಿ ಪಟ್ಟಣಕ್ಕೆ ಬಸ್ ಸೌಲಭ್ಯ ಹಾಗೂ ನಿಲ್ದಾಣದಲ್ಲಿ ಸ್ವಚ್ಚತೆ ಕೈಗೊಳ್ಳಬೇಕು ಇಲ್ಲದಿದ್ದರೆ ನಿಲ್ದಾಣದಲ್ಲೇ ಆಮರಣ ಉಪವಾಸ ಸತ್ಯಾಗ್ರಹ ಹಮ್ಮೀಕೊಳ್ಳಲಾಗುವದು ಎಂದು ಎಚ್ಚರಿಕೆ ನಿಡಿದ್ದಾರೆ.
ಈ ಸಂದರ್ಭದಲ್ಲಿ ಪತ್ರಕರ್ತ ಸಂಘದ ಅಧ್ಯಕ್ಷ ಸೈಯದ ದೇವರಮನಿ. ಮುಖಂಡರಾದ ಹರಿಷ ಎಂಟಮನ್ ಮಂಜುನಾಥ ಯಂಟಮಾನ,ಸಂಜು ಮೇಲಿನಮನಿ.ಜಟ್ಟೇಪ್ಪ ರಾಯಚೂರ,ಲಕ್ಕಪ್ಪ ಕುರಬತಹಳ್ಳಿÀ,ಪವನ ಕಾಳೆ,ಗಾಲೀಬ ನಾದ,ರಾಜು ದೊಡಮನಿ,ಮನೋಹರ ಈಟಿ,ಅಂಬಾದಾಸ ಬಿಳಂಬಗಿ ಇದ್ದರು.