ಬಸ್ ಸೌಲಭ್ಯ ಕಲ್ಪಿಸಲು ಗ್ರಾಮಸ್ಥರ ಒತ್ತಾಯ

ದೇವದುರ್ಗ.ಡಿ.೨೫- ದೇವದುರ್ಗದಿಂದ ಬೆಂಗಳೂರಿಗೆ ತೆರಳುವ ಸಾರಿಗೆ ಸಂಸ್ಥೆ ಬಸ್‌ಗಳನ್ನು ಆಲ್ಕೋಡ್ ಗ್ರಾಮದ ಮಾರ್ಗವಾಗಿ ಸಂಚರಿಸುವ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಪಟ್ಟಣದ ಬಸ್ ಡಿಪೋದಲ್ಲಿ ವ್ಯವಸ್ಥಾಪಕರಿಗೆ ಆಲ್ಕೋಡ್ ಗ್ರಾಮಸ್ಥರು ಮನವಿ ಸಲ್ಲಿಸಿ ಆಗ್ರಹಿಸಿಸದರು.
ಅರಕೇರಾ ಹೋಬಳಿ ವ್ಯಾಪ್ತಿಯ ಬಹುತೇಕ ಜನರು ಬೆಂಗಳೂರಿಗೆ ಗುಳೆ ಹೋಗುತ್ತಿದ್ದಾರೆ. ಅದರಲ್ಲೂ ಆಲ್ಕೋಡ್ ಮಾರ್ಗದಲ್ಲಿ ನಿತ್ಯ ಕೂಲಿಕಾರರು ಬೆಂಗಳೂರಿಗೆ ದುಡಿಯಲು ಹೋಗುತ್ತಿದ್ದಾರೆ. ಈ ಭಾಗದ ಜನರಿಗೆ ಬಸ್ ಸೌಲಭ್ಯ ಇಲ್ಲದ ಕಾರಣ ದುಬಾರಿ ಹಣ ನೀಡಿ ಖಾಸಗಿ ಕ್ರೂಸರ್ ಸೇರಿ ಇತರೆ ವಾಹನಗಳಲ್ಲಿ ತೆರಳುತ್ತಿದ್ದಾರೆ. ಇದರಿಂದ ಅವಘಡಗಳು ಸಂಭವಿಸುವ ಸಾಧ್ಯತೆಯಿದೆ. ಹಲವು ಸಂದರ್ಭದಲ್ಲಿ ಈ ಭಾಗದ ಕೂಲಿಕಾರರ ಬೆಂಗಳೂರಿಗೆ ಹೋಗುವಾಗ ಅಪಘಾತಕ್ಕೆ ಒಳಗಾಗಿದ್ದಾರೆ ಎಂದು ದೂರಿದ್ದಾರೆ.
ಕೂಡಲೇ ಬೆಂಗಳೂರಿಗೆ ತೆರಳುವಂಥ ಸಾರಿಗೆ ಸಂಸ್ಥೆ ಬಸ್‌ಗಳನ್ನು ಭೂಮನಗುಂಡ, ಆಲ್ಕೋಡ್, ನಾರಬಂಡ, ನವಲಕಲ್ ಮೂಲಕ ಸಿರವಾರಗೆ ಹೋಗುವ ಹಾಗೇ ಬಸ್ ಮಾರ್ಗ ಒದಗಿಸಬೇಕು. ಇದರಿಂದ ಬೆಂಗಳೂರಿಗೆ ಹೋಗುವ ಹಾಗೂ ಅಲ್ಲಿಂದ ಬರುವ ಕೂಲಿಕಾರರಿಗೆ ಅನುಕೂಲ ಆಗಲಿದೆ. ಅಲ್ಲದೆ ಶಾಲಾ ಕಾಲೇಜಿಗೆ ತೆರಳುವಂಥ ವಿದ್ಯಾರ್ಥಿಗಳು ಹಾಗೂ ದೇವದುರ್ಗ, ಸಿರವಾರ, ಅರಕೇರಾ ಹೋಗುವ ಹಿರಿಯರಿಗೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶರಣಬಸವ ನಾಯಕ, ನಾಗರಾಜ, ಸಾಬಣ್ಣ ಮಕ್ಕಾಳಿ, ರವಿಕುಮಾರ, ಹನುಮೇಶ, ಕುಪ್ಪಯ್ಯ ಭೋವಿ, ಹನುಮಂತ ಶಾವಂತಗೇರಾ, ರವಿನಾಯಕ, ಅಶೋಕ, ಪ್ರವೀಣ ಪಾಟೀಲ್ ಇತರರಿದ್ದರು.