ಬಸ್ ಸೌಲಭ್ಯ ಒದಗಿಸಲು ಒತ್ತಾಯಿಸಿ ಪ್ರತಿಭಟನೆ

ಕಾಳಗಿ,ಜು.22-ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಬಸ್ಸಿನ ಸೌಲಭ್ಯ ಒದಗಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಕೊಡ್ಲಿ ಕ್ರಾಸ್ ಬಳಿ ಇಂದು ಪ್ರತಿಭಟನೆ ನಡೆಸಿ ಕಾಳಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕರಿಗೆ ಮನವಿಪತ್ರ ಸಲ್ಲಿಸಲಾಯಿತು.
ರಟಕಲ್, ಕಂಚನಾಳ, ಹುಲುಸಗುಡ, ಸುಂಠಾಣ ಕೊಡ್ಲಿ ಕ್ರಾಸ್ ಮಾರ್ಗವಾಗಿ ಕಾಳಗಿಗೆ ಶಾಲಾ ಕಾಲೆಜುಗಳಿಗೆ ಹೊಗಲು ಬಸ್ಸಿನ ಸೌಕರ್ಯ ವಿಲ್ಲದೆ ವಿಧ್ಯಾರ್ಥಿಗಳು ಪರದಾಡುವಂತಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಒಂದು ಕ್ಲಾಸ್ ತಪ್ಪುತ್ತಿವೆ ಹೀಗಾಗಿ ವಿಧ್ಯಾರ್ಥಿಗಳು ಮಕ್ಕಳು ಭವಿಷ್ಯದ ಮೇಲೆ ಬರೆ ಎಳೆದಂತಾಗುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಾಳಗಿಗೆ ಹೋಗಿ ಬರಲು ಅನಾನುಕೂಲವಿದೆ. ಹಳ್ಳಿಯ ಮಕ್ಕಳು ತುಂಬಾ ಸಂಕಷ್ಟದಲ್ಲಿದ್ದಾರೆ ಮಕ್ಕಳು ಬಸ್ಸಿಗೆ ಜೊತು ಬಿದ್ದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ ಕಾರಣ ತಕ್ಷಣವೇ ಬಸ್ಸಿನ ಸೌಲಭ್ಯ ಒದಗಿಸಬೇಕು ಎಂದು ಪ್ರತಿಭಟನೆಯ ನೇತೃತ್ವವಹಿಸಿದ್ದ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ ಆಗ್ರಹಿಸಿದರು.
ಅನಿಲಕುಮಾರ, ಅರುಣಕುಮಾರ ಸೇರಿದಂತೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.