ಬಸ್ ಸೌಲಭ್ಯ ಒದಗಿಸಲು ಆಗ್ರಹ

ಹಟ್ಟಿ,ಜು.೦೬-
ಹಟ್ಟಿ-ಯಲಗಟ್ಟಾ ಮಾರ್ಗವಾಗಿ ಈ ಹಿಂದೆ ಸಂಚರಿಸುತ್ತಿದ್ದ ಬಸ್ ಸಂಚಾರ ಸ್ಥಗಿತೊಳಿಸಿದ್ದರಿಂದ ತೀವ್ರ ಸಮಸ್ಯೆಯಾಗಿದೆ ಎಂದು ಯಲಟಗಟ್ಟಾ ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಕುರಿತು ಕರುನಾಡ ವಿಜಯಸೇನೆ ಸಂಘಟನೆ ಯಲಗಟ್ಟಾ ಗ್ರಾಮ ಘಟಕದ ನೇತೃತ್ವದಲ್ಲಿ ಗ್ರಾಮಸ್ಥರು, ವಿದ್ಯಾರ್ಥಿಗಳು ಮಂಗಳವಾರ ಒಂದು ದಿನ ಹಟ್ಟಿ ಪಟ್ಟಣದ ಮುಂಭಾಗ ಸಾಂಕೇತಿಕ ಪ್ರತಿಭಟನೆ ನಡೆಸಿ ಡಿಪೋ ವ್ಯವಸ್ಥಾಪಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಬೆಳಿಗ್ಗೆ ೮, ೯.೩೦, ಹಾಗೂ ೧೧ ಗಂಟೆಗೆ ಮಧ್ಯಾಹ್ನ ೧.೩೦, ಸಾಯಂಕಾಲ ೫ ಹಾಗೂ ೭.೩೦ ಗಂಟೆಗೆ ಯಲಗಟ್ಟಾ ಮಾರ್ಗವಾಗಿ ಹೊರಡ ಬೇಕಿದ್ದ ಬಸ್ ಸಂಪರ್ಕವನ್ನು ಕಡಿತಗೊಳಿಸಿದ್ದರಿಂದ ವಿದ್ಯಾರ್ಥಿ, ಕಂಪನಿ ಕಾರ್ಮಿಕರು ಹಾಗೂ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.
ಸಮಸ್ಯೆ ತೀವ್ರತೆ ಅರಿತು ಕೂಡಲೆ ಸ್ಥಗಿತಗೊಂಡ ಬಸ್ ಸಂಚಾರವನ್ನು ಪುನರಾರಂಭಿಸಬೇಕೆಂದು ಒತ್ತಾಯಿಸಿ, ಹಟ್ಟಿ ಸಾರಿಗೆ ನಿಯಂತ್ರಕರಿಗೆ ಸಂಘಟನೆಯ ಯಲಗಟ್ಟಾ ಗ್ರಾಮ ಘಟಕದ ಅಧ್ಯಕ್ಷ ರಂಗಪ್ಪ ಭೋವಿ, ಗ್ರಾಮದ ಪ್ರಮುಖರಾದ ಗುಂಡಪ್ಪ ಹಾಗೂ ವಿದ್ಯಾರ್ಥಿಗಳಾದ ಮಾಳಿಂಗರಾಯ, ದುರಗಪ್ಪ, ಜೈದೇವ್ ಮಾಳಪ್ಪ ಸೇರಿದಂತೆ ಇದ್ದರು.