ಬಸ್ ಸೌಲಭ್ಯಕ್ಕೆ ಚಾಲನೆ


ಲಕ್ಷ್ಮೇಶ್ವರ,ಜ.19: ಲಕ್ಷ್ಮೇಶ್ವರ ಘಟಕದಿಂದ ಲಕ್ಷ್ಮೇಶ್ವರ ಹುಬ್ಬಳ್ಳಿ ಮಧ್ಯ ನೇರ ಬಸ್ಸಿನ ಸೌಲಭ್ಯಕ್ಕೆ ಮಂಗಳವಾರ ಶಾಸಕ ಡಾಕ್ಟರ್ ಚಂದ್ರು ಲಮಾಣಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಲಕ್ಷ್ಮೇಶ್ವರ ಹುಬ್ಬಳ್ಳಿ ಮಧ್ಯ ವಿಪರೀತವಾದ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು ನೇರವಾಗಿ ಹೋಗಲು ಇದರಿಂದ ಅನುಕೂಲವಾಗಲಿದೆ ಮತ್ತು ವೇಳೆ ಉಳಿತಾಯವು ಆಗಲಿದೆ ಎಂದು ಹೇಳಿದ ಅವರು ಇನ್ನಷ್ಟು ಹೆಚ್ಚಿನ ಬಸ್ಸುಗಳನ್ನು ಲಕ್ಷ್ಮೇಶ್ವರ ಹುಬ್ಬಳ್ಳಿ ಮಧ್ಯ ಸಂಪರ್ಕ ಕಲ್ಪಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಗದಗ ವಿಭಾಗದ ವಿಭಾಗಿಯ ನಿಯಂತ್ರಣಾಧಿಕಾರಿಗಳಾದ ದೇವರಾಜ ಘಟಕ ವ್ಯವಸ್ಥಾಪಕರಾದ ಎಸ್ ವಿ ಹಕ್ಕಾ ಪಕ್ಕಿ ಸಿಬ್ಬಂದಿಗಳಾದ ಕಳಸದ ಶ್ರೀಕಾಂತ್ ಸೇರಿದಂತೆ ಅನೇಕರಿದ್ದರು.