ಬಸ್ ಸೌಲಭ್ಯಕ್ಕೆ ಒತ್ತಾಯಿಸಿ ಮನವಿ


ಬ್ಯಾಡಗಿ,ಜು.22: ತಾಲೂಕಿನ ತಿಮ್ಮಾಪುರ ಗ್ರಾಮಕ್ಕೆ ಬಸ್ ಸೌಲಭ್ಯಕ್ಕಾಗಿ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಬ್ಯಾಡಗಿ ತಾಲೂಕ ಸಮಿತಿಯ ವತಿಯಿಂದ ಕೆಎಸ್‍ಆರ್‍ಟಿಸಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಮನವಿ ಸಲ್ಲಿಸಿದ ನಂತರ ಮಾತನಾಡಿದ ತಾಲೂಕ ಸಮಿತಿಯ ಅಧ್ಯಕ್ಷ ಮಂಜುನಾಥ ದಾನಪ್ಪನವರ, ತಾಲೂಕಿನ ತಿಮ್ಮಾಪುರ ಗ್ರಾಮಕ್ಕೆ ಇದುವರೆಗೂ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರ ಸಂಚಾರಕ್ಕಾಗಿ ಬಸ್ ಸೌಲಭ್ಯ ಕಲ್ಪಿಸದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದರಲ್ಲದೇ, ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚಿನ ಬಸ್ ಸೌಲಭ್ಯವನ್ನು ಕಲ್ಪಿಸಬೇಕೆಂದು ಕೆಎಸ್‍ಆರ್‍ಟಿಸಿ ಘಟಕ ವ್ಯವಸ್ಥಾಪಕ ಕೆ.ಸಿ.ಪಾಟೀಲ ಅವರನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಅಧ್ಯಕ್ಷ ಹಾಗೂ ರಾಜ್ಯ ಕಾರ್ಯಾಧ್ಯಕ್ಷ ರಾಮು ತಳವಾರ, ಜಿಲ್ಲಾ ಮಹಿಳಾ ಸಮಿತಿಯ ಅಧ್ಯಕ್ಷೆ ಸುಮಾ ಪುರದ, ಉಪಾಧ್ಯಕ್ಷೆ ಪ್ರೇಮ ಮುದಿಗೌಡ್ರ, ತಾಲೂಕಾಧ್ಯಕ್ಷೆ ಚನ್ನಮ್ಮ ಕುರಿಗೆರ, ವಿನಾಯಕ ಬಡಿಗೇರ, ಸುಮಿತ್ರ ಕರಡಿ, ಶಿವಾನಂದ ಚಿಕ್ಕಳ್ಳಿ, ನಿಂಗಪ್ಪ ಕಚವಿ, ಲಲಿತಾ ಮತ್ತೂರ, ರೇಣುಕಾ ಕೊಪ್ಪದ, ಸವಿತಾ ಬಡಿಗೇರ, ಅನ್ನಪೂರ್ಣ ಬಡಿಗೇರ, ಕರಬಸಪ್ಪ ಮೇಗಳಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.