ಬಸ್ ಸೌಲಭ್ಯಕ್ಕಾಗಿ ಪ್ರತಿಭಟನೆ

ಚಿಟಗುಪ್ಪ: ಡಿ.29:ತಾಲೂಕ ಕೇಂದ್ರವಾಗಿ ಸುಮಾರು 8-9 ವರ್ಷಗಳು ಕಳೆದರು ಕೂಡ ತಾಲೂಕಿಗೆ ಸರಿಯಾದ ಸಮಯಕ್ಕೆ ಬಸ್ಸಿನ ವ್ಯವಸ್ಥೆ ಇಲ್ಲಾ ರಾತ್ರಿ 8.30 ಘಂಟೆಗೆ ಚಿಟಗುಪ್ಪದಿಂದ ಹುಮನಾಬಾದ ಹೋಗಲು ಮತ್ತು ರಾತ್ರಿ 10 ಘಂಟೆಗೆ ಹುಮನಾಬಾದದಿಂದ ಚಿಟಗುಪ್ಪಕ್ಕೆ ಬರಲು ಬಸ್ಸಿನ ವ್ಯವಸ್ಥೆಯಿಲ್ಲಾ ತಾಲೂಕಿಗೆ ಒಳಪಡುವ ಗ್ರಾಮಗಳಾದ ಬೆಳಕೇರಾ, ಫಾತ್ಮಪುರ್, ಶಾಮತಬಾದ, ಉಡಬಾಳ, ನಿರ್ಣಾ, ಕೋಡಂಬಲ್, ಮುದನ್ನಾಳ, ಇಟಗಾ, ಮುಸ್ತರಿ, ಮುಸ್ತರಿವಾಡಿ, ಮಾಡಗುಳ, ಬೆಂಕಿಪಳ್ಳಿ, ಯಲಮಡಗಿ, ರಾಂಪುರ, ಬನ್ನಳ್ಳಿ,ಕಂದಗುಳ, ವಳಖಿಂಡಿ, ಸೊಂತ, ಚಿಮ್ಮನಚೋಡ್, ಭುಯ್ಯರ್, ಸುಲೇಪಟ್ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಾರಿಗೆ ಬಸ್ ಸೌಕರ್ಯವನ್ನು ಕೂಡಲೇ ಒದಗಿಸುವಂತೆ ತಾಲೂಕು ಕನ್ನಡ ಸೇನೆ ಕರ್ನಾಟಕ ಸಂಘಟನೆ ರಾಜ್ಯ ಉಪಾಧ್ಯಕ್ಷ ಡಾ. ರವಿ ಸ್ವಾಮಿ ನಿರ್ಣಾ ಅವರ ನೇತೃತ್ವದಲ್ಲಿ ಪಟ್ಟಣದ ಮುಖ್ಯದ್ವಾರ (ಬೇಸ್)ಯಿಂದ ನೂರಾರು ವಿಧ್ಯಾರ್ಥಿಗಳೊಂದಿಗೆ ಬೇಡಿಕೆಗಳ ಜೈಘೋಷ ಹಾಕುತ್ತಾ ಬಸವರಾಜ ವೃತ್ತದಲ್ಲಿ ಸುಮಾರು 2 ತಾಸು ರಸ್ತೆಯ ಮೇಲೆ ಕುಳಿತುಕೊಂಡು ಪ್ರತಿಭಟಿಸಿ ಹುಮನಾಬಾದ ಸಾರಿಗೆ ಪ್ರಭಾರಿ ವ್ಯವಸ್ಥಾಪಕರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.
ಡಾ. ರವಿ ಸ್ವಾಮಿ ನಿರ್ಣಾ ಮಾತನಾಡಿ, ಉಡಬಾಳ, ನಿರ್ಣಾ, ಇಟಗಾ, ಕೋಡಂಬಲ್, ಮುಸ್ತರಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಬಸ್ಸಿನ ಓಡಾಟ ಇಲ್ಲದ ಕಾರಣ ತಾಲೂಕಿಗೆ ಒಳಪಡುವ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ ವಿದ್ಯಾರ್ಥಿಗಳು ನಿತ್ಯ ಬೆಳಿಗ್ಗೆ ಶಾಲಾ ಕಾಲೇಜುಗಳ ತರಗತಿಗಳಿಗೆ ಹಾಜರಾಗಬೇಕಾದರೆ ಬಸ್‍ಗಳೆ ಇಲ್ಲ. ವಿದ್ಯಾರ್ಥಿಗಳು, ಗ್ರಾಮಸ್ಥರು ವಿವಿಧ ಕೆಲಸಗಳ ನಿಮಿತ್ತ ಪಟ್ಟಣಕ್ಕೆ ತೆರಳಲು ನಿತ್ಯವೂ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಸಾರಿಗೆ ಘಟಕದ ವ್ಯವಸ್ಥಾಪಕರು ಗ್ರಾಮಗಳಿಗೆ ಬಸ್ ಸೌಕರ್ಯವನ್ನು ಇಂದಿನಿಂದ ಸರಿಯಾದ ಸಮಯಕ್ಕೆ ಬಸ್ಸು ಒದಗಿಸಬೇಕು. ಇಲ್ಲದಿದ್ದರೆ, ಬರುವ ದಿನಗಳಲ್ಲಿ ಚಿಟಗುಪ್ಪ ಸಂಪೂರ್ಣ ಬಂದ್ ಮಾಡುವ ಮೂಲಕ ಸಾವಿರಾರು ವಿಧ್ಯಾರ್ಥಿಗಳು ಹಾಗೂ ಕನ್ನಡ ಸೇನೆ ಕರ್ನಾಟಕ ಸಂಘಟನೆಯ ಕಾರ್ಯಕರ್ತರೊಂದಿಗೆ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು. ವಿದ್ಯಾರ್ಥಿನಿ ಮಾತನಾಡಿ ನಾವು ಕಾಲೇಜಿಗೆ ಬರಲು ಹೋಗಲು ಸರಿಯಾದ ಸಮಯಕ್ಕೆ ಬಸ್ ನಮ್ಮ ಗ್ರಾಮಗಳಿಗೆ ಬರುತ್ತಿಲ್ಲಾ ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಬಸ್ ಬಂದಿದ್ದರು ಬಸ್ ಕೂಡ ಒಳಗಡೆ ಖಾಲಿಯಿರುತ್ತೆ ಆದರೆ ಕಂಡೆಕ್ಟರ್ ಜನರಿಗೆ ಒಳಗಡೆ ಹೋಗಿ ಎಂದು ಹೇಳುವುದಿಲ್ಲ ವಿಧ್ಯಾರ್ಥಿಗಳು ಬಸ್ ಹತುತ್ತಲೇ ಇರುತ್ತಾರೆ ಬಸ್ ಅನ್ನು ತೆಗೆದುಕೊಂಡು ಹೋಗುತ್ತಾರೆ ಮೊನ್ನೆ ಉಡಬಾಳ ಗ್ರಾಮದಲ್ಲಿ ಬಸ್ ಹತ್ತಲು ಹೋಗಿ ಇಬ್ಬರು ವಿಧ್ಯಾರ್ಥಿಗಳು ಬಿದ್ದಿದ್ದಾರೆ ಬಸ್ ಕಂಡೆಕ್ಟರ್ ವಿಧ್ಯಾರ್ಥಿಗಳಿಗೆ ಗೌರವ ಕೊಡುವುದಿಲ್ಲಾ ಏಕ ವಚನದಲ್ಲೇ ಮಾತನಾಡುತ್ತಾರೆ ಇನ್ನು ಮುಂದೆ ಇದೆ ರೀತಿ ಏಕ್ ವಚನದಲ್ಲಿ ಮಾತನಾಡಿದರೆ ನಾವು ಸಹಿಸಿಕೊಳ್ಳುವುದಿಲ್ಲಾ ಎಂದು ಎಚ್ಚರಿಕೆ ನೀಡಿದ್ದಾರೆ. ಬಸ್ ಘಟಕ ಪ್ರಭಾರಿ ವ್ಯವಸ್ಥಾಪಕ ಅಧಿಕಾರಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು ಇಂದಿನಿಂದ ಸರಿಯಾದ ಸಮಯಕ್ಕೆ ಬಸ್ ಓಡಿಸುತ್ತೇವೆ ಚಿಟಗುಪ್ಪ ತಾಲೂಕಿಗೆ 6 ಬಸ್ ಗಳು ನೀಡುತ್ತೇವೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಕಾರ್ಯಾಧ್ಯಕ್ಷ ಸುಭಾಷ, ತಾಲೂಕಾಧ್ಯಕ್ಷ ಪವನ ಪೂಜಾರಿ, ಲಿಂಗಪ್ಪಾ ವಾರಿಕ್, ಸತೀಶ ಗಂಜಿ, ಶಿವಾರೆಡ್ಡಿ, ಹಮ್ಮಿದ, ರಮೇಶ, ಕಾಶಿನಾಥ್, ಕಾಳಪ್ಪಾ, ನಾಗರಾಜ, ಸಲೀಮ್, ಸಾಯಿಕುಮಾರ್, ಸಾದೀ ಇನುಷ್ ಖಾದ್ರಿ, ಶೇಕ್ ಹರ್ಷದ, ತಿಪ್ಪಣ್ಣರೆಡ್ಡಿ, ಸೋಮನಾಥ ಸ್ವಾಮಿ, ಮಹಾನಂದ ಜಮದಾರ್, ಮೀನಾಕ್ಷಿ ಕಟ್ಟಿಮನಿ, ಅಭಿಮಾನ ಕಲವಾಡಕರ್ ಸೇರಿದಂತೆ ಕನ್ನಡ ಸೇನೆ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.