ಬಸ್ ಸೌಕರ್ಯ ಒದಗಿಸಲು ಅ.ಭಾ.ವಿ.ಪ ಮನವಿ

ಇಂಡಿ: ಜೂ.29: ಪಟ್ಟಣದಲ್ಲಿ ಅಖೀಲ ಭಾರತ ವಿಧ್ಯಾರ್ಥಿ ಪರಿಷತ ತಾಲೂಕಾ ಶಾಖೆ ಇಂಡಿ ವತಿಯಿಂದ ವಿಧ್ಯಾರ್ಥಿಗಳಿಗೆ ಸೂಕ್ತ ಬಸ್ಸಿನ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ನಗರ ಘಟಕ ಕಾರ್ಯದರ್ಶಿ ಪ್ರಪುಲ ಕಟ್ಟಿಮನಿ ನೈತೃತ್ವದಲ್ಲಿ ನೂರಾರು ವಿಧ್ಯಾರ್ಥಿ, ವಿಧ್ಯಾರ್ಥಿನಿಯವರು ರಸ್ತೆಯುದ್ದಕ್ಕೂ ಸಾಗಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಜೂನ್ ತಿಂಗಳಲ್ಲಿ ಶಾಲೆ ಕಾಲೇಜುಗಳು ಪ್ರಾರಂಭವಾಗಿದ್ದು ವಿಧ್ಯಾರ್ಥಿಗಳು ಗ್ರಾಮೀಣ ಭಾಗದಿಂದ ನಗರಕ್ಕೆ ಬರಬೇಕಾದರೆ ಬಸ್ ಸೌಕರ್ಯ ಇಲ್ಲದೆ ದೀನಾ ಹಾಜರಾತಿ ಕೊರತೆಯುಂಟಾಗುತ್ತಿದೆ. ಇಂದು ಸರಕಾರ ತಂದ ಶಕ್ತಿ ಯೋಜನೆಯಡಿ ಹಳ್ಳಿಗಳ ನಗರ ಮಹಿಳೆಯರು ಉಚಿತ ಪ್ರಯಾಣ ಇರುವದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ ಇದರಿಂದ ವಿಧ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬರುವಂಹವರಿಗೆ ಸಮಸ್ಯಯಾಗಿದೆ.
ಪ್ರತಿ ನಿತ್ಯ ಸರಿಯಾದ ಬಸ್ಸಿನ ಸೌಕರ್ಯ ಇಲ್ಲದೆ ಇರುವದರಿಂದ ಗ್ರಾಮೀಣ ಬಾಗದ ವಿಧ್ಯಾರ್ಥಿಗಳಿಗೆ ವಿಧ್ಯಾಭ್ಯಾಸ ಕುಂಟಿತವಾಗುವುದರೊಂದಿಗೆ ಹಾಜರಾತಿ ಕಡಿಮೆಯಾಗುತ್ತದೆ.  ಕಳೆದ ದಿನಗಳ ಹಿಂದೆ ಹಾವೇರಿಯಲ್ಲಿ ವಿಧ್ಯಾರ್ಥಿನಿ ಬಸ್ಸನ್ನು ಹತ್ತಲು ಹೋಗಿ ಅಫಘಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೇಯುತ್ತಿದ್ದಾಳೆ.  ಸ್ವಾತಂತ್ರ್ಯ ಸಿಕ್ಕು ಅನೇಕ ವರ್ಷಗಳು ಗತಿಸಿದರೂ ಕೂಡಾ ಕೆಲ ಹಳ್ಳಿಗಳಿಗೆ ಇನ್ನು ಸರಿಯಾದ ಬಸ್ಸ್ ಸೌಲಭ್ಯ ಇಲ್ಲ .ಶಕ್ತಿ ಯೋಜನೆಯಿಂದ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ ಕೂಡಲೆ ಸರಕಾರ ಹೆಚ್ಚುವರಿ ಬಸ್ಸು ಒದಗಿಸಬೇಕು.  ವಿಧ್ಯಾರ್ಥಿಗಳು ಶಾಲಾ ಕಾಲೇಜು ತೆರಳುವ ಸಮಯ ಹಾಗೂ ಬಿಡುವಿನ ಸಮಯದಲ್ಲಿ ಬಸ್ಸಿನ ಸಂಖ್ಯೆ ಹೆಚ್ಚಿಸಬೇಕು ಹಾಗೂ ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ಸಿನ ವ್ಯವಸ್ಥೆ ಮಾಡಬೇಕು. ಈಗಾಗಲೆ ವಿಧ್ಯಾರ್ಥಿಗಳಿಗೆ ಉಚಿತ ಬಸ್ಸಿನ ವ್ಯವಸ್ಥೆ ಮಾಡಿದಂತೆ ಮುಂದಿನ ಯೋಜನೆಗಳಲ್ಲಿ ವಿಧ್ಯಾರ್ಥಿಗಳಿಗೆ ಉಚಿತ ಬಸ್ಸಿನ ವ್ಯವಸ್ಥೆ  ಒದಗಿಸಿಕೊಡಬೇಕು ಈ ಎಲ್ಲಾ ವ್ಯವಸ್ಥೆ ಕೂಡಲೆ ಒದಗಿಸಬೇಕು ಎಂದು ಅಖಿಲ ಭಾರತ ವಿಧ್ಯಾರ್ಥಿ ಪರಿಷತ  ತಾಲೂಕಾ ಶಾಖೆ ಇಂಡಿ ಮನವಿ ಸಲ್ಲಿಸಿದರು.

ನಗರ ಕಾರ್ಯದರ್ಶಿ ಪ್ರೋಫುಲ ಕಟ್ಟಿಮನಿ, ಸಚೀನ ಧನಗೊಂಡ, ಈರಣ್ಣಾ ಸಿಂದಗಿ, ದರ್ಶನ ತೋಳನೂರ, ಸೀತಲ ಹಿರೇಮಠ, ಗಣೇಶ ಹಂಜಗಿ, ಪ್ರಜ್ವಲ ಬೀಸೆ, ಸಮರ್ಥ ಗಾಯಕವಾಡ, ಸುಶ್ಮೀತಾ ಗೋರನಾಳ, ಅವಮ್ಮಾ, ರೋಹಿತ ನಾಯಕೋಡಿ, ಸಾಮ್ರಾಟ ಲೋಣಿಕರ್, ಕರ್ಣ ಖರಾತ ಸೇರಿದಂತೆ ನೂರಾರು ವಿಧ್ಯಾರ್ಥಿಗಳು ಮನವಿಯಲ್ಲಿದ್ದರು.