ಬಸ್ ಸೌಕರ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಮುತ್ತಿಗೆ

ಲಕ್ಷ್ಮೇಶ್ವರ:- ಪ್ರಸಕ್ತ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಭೌತಿಕ ವರ್ಗಗಳೊಂದಿಗೆ ಆರಂಭಗೊಂಡಿದ್ದು ಶಾಲಾ ಕಾಲೇಜುಗಳಿಗೆ ಹೋಗಲು ಸಾರಿಗೆ ಅವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳು ನಿತ್ಯವೂ ಪರದಾಡುತ್ತಿದ್ದು ಮಂಗಳವಾರ ಸಹನೆಯ ಕಟ್ಟೆ ಒಡೆದು ಲಕ್ಷ್ಮೇಶ್ವರ ಡಿಪೆÇೀಕ್ಕೆ ಮುತ್ತಿಗೆ ಹಾಕಿದ ಘಟನೆ ಜರುಗಿದೆ.
ಈಗ ಶಾಲಾ-ಕಾಲೇಜುಗಳ ವೇಳೆ ಏಕಕಾಲಕ್ಕೆ ಆಗಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ 3 ಪಟ್ಟು ಹೆಚ್ಚಾಗಿದ್ದು ಬಸ್ಸಿನ ಕೊರತೆಯಿಂದಾಗಿ ವಿದ್ಯಾರ್ಥಿಗಳು ಕೇವಲ ನಿಲ್ದಾಣದಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಶಿಕ್ಷಣಕ್ಕಾಗಿ ಪ್ರತಿನಿತ್ಯ ಹುಲಗೂರು, ಶಿಶುವಿನಾಳ, ಅತ್ತಿಗೇರಿ, ಮಂಡಿಗನಾಳ, ಗುಡಿಗೇರಿ, ಹರ್ಲಾಪುರ, ರಾಮಗಿರಿ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಬರುತ್ತಿದ್ದಾರೆ ಆದರೆ ಶಾಲಾ ಸಮಯಕ್ಕೆ ಬಸ್ಸುಗಳ ವ್ಯವಸ್ಥೆ ಇಲ್ಲದ್ದರಿಂದ ನಿತ್ಯವೂ ಶಾಲೆಯಲ್ಲಿ ಪಾಠ-ಪ್ರವಚನ ತಪ್ಪಿಸಿಕೊಳ್ಳುವ ಸ್ಥಿತಿ ಉಂಟಾಗಿದ್ದರಿಂದ ಮಂಗಳವಾರ ಹರ್ಲಾಪುರ ದಿಂದ ಟ್ರಾಕ್ಟರುಗಳಲ್ಲಿ ಪಾಲಕರು ಸಮೇತ ಆಗಮಿಸಿದ ನೂರಾರು ವಿದ್ಯಾರ್ಥಿಗಳು ಡಿಪೆÇೀಕ್ಕೆ ಮುತ್ತಿಗೆ ಹಾಕಿ ಸಮರ್ಪಕ ಬಸ್ ಬಿಡುವಂತೆ ಪಟ್ಟುಹಿಡಿದರು.
ಕಳೆದ 15 ದಿನಗಳಿಂದ ಘಟಕ ವ್ಯವಸ್ಥಾಪಕರು ಇಲ್ಲದ್ದರಿಂದ ಗಲಿಬಿಲಿಗೊಂಡ ಘಟಕ ಸಿಬ್ಬಂದಿ ಏಕಾಏಕಿ ಗೊಂದಲಕ್ಕೆ ಬಿದ್ದರು ಆಗ ಸಹನೆ ಕಳೆದು ಕೊಂಡಿದ್ದ ಪಾಲಕರು, ವಿದ್ಯಾರ್ಥಿಗಳು ಸಿಬ್ಬಂದಿಯ ಮೇಲೆ ಮುಗಿಬಿದ್ದು ನೀವು ಯಾವುದೇ ಕಾರಣ ಹೇಳಬೇಡಿ ಹಣಕೊಟ್ಟು ಪಾಸ್ ಪಡೆದುಕೊಂಡಿದ್ದೇವೆ ವೇಳೆಗೆ ಸರಿಯಾಗಿ ಬಸ್ಸು ಬಿಡಲೇಬೇಕು ಎಂದು ಏರಿದ ಧ್ವನಿಯಲ್ಲಿ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು.
ಆಗ ಸಿಬ್ಬಂದಿ ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಾರ್ವಜನಿಕರ ಗಮನಕ್ಕೆ ತರುತ್ತಿದ್ದಂತೆ ಪಾಲಕರು ಹಾಗೂ ವಿದ್ಯಾರ್ಥಿಗಳು ಸಿಬ್ಬಂದಿಗೆ ಈಗ ಲಕ್ಷ್ಮೇಶ್ವರದಿಂದ ಹುಬ್ಬಳ್ಳಿಗೆ ಹೋಗುತ್ತಿರುವ ಬಸ್ಸುಗಳನ್ನು ಹರ್ಲಾಪುರ ಗ್ರಾಮದೊಳಕ್ಕೆ ಬಂದು ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಎಂಬಂತೆ ಸಾರಿಗೆ ಸಿಬ್ಬಂದಿ ಇದನ್ನು ಕೂಡಲೇ ಜಾರಿಗೆ ತರುವಂತೆ ಬಸ್ ನಿಲ್ದಾಣದ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ಹೇಳಿದರು ಆಗ ವಿದ್ಯಾರ್ಥಿಗಳು ಮತ್ತು ಪಾಲಕರು ಸಿಬ್ಬಂದಿಯ ಮಾತಿಗೆ ಮನ್ನಣೆ ನೀಡಿ ಶಾಂತರೀತಿಯಿಂದ ಘಟಕದಿಂದ ತೆರಳಿದರು.
ಹರ್ಲಾಪುರ ಗ್ರಾಮದ ಮುಖಂಡರಾದ ರಾಮಣ್ಣ ಪೂಜಾರ, ಈಶ್ವರ್ ಭಂಡಿವಾಡ್, ಗಂಗಾಧರ್ ಕೊಪ್ಪದ, ಯೋಗಿ ಅಂದಾನಯ್ಯ ಹಿರೇಮಠ್, ಪ್ರವೀಣ್ ಕಟ್ಟಿಮನಿ, ಅರುಣ್ ಹುಬ್ಬಳ್ಳಿ, ಗಂಗಾಧರ್ ದೊಡ್ಮನಿ, ವಿನಾಯಕ್ ಕಲ್ಲಣ್ಣನವರ್, ಬಸವರಾಜ್ ನಾಗರಹಳ್ಳಿ, ನಿಂಗಪ್ಪ ಹೊನ್ನಪ್ಪನವರ, ಮಾರುತಿ ತಳವಾರ್ ಸೇರಿದಂತೆ ಅನೇಕರಿದ್ದರು.