
ಬೆಂಗಳೂರು, ಮೇ ೯- ರಾಜ್ಯ ವಿಧಾನಸಭೆ ಚುನಾವಣೆಗೆ ನಾಳೆ ಮತದಾನ ನಡೆಯುತ್ತಿದ್ದು ಮತದಾನಕ್ಕೆ ಊರಿಗೆ ಹೋಗುವವರಿಗೆ ಬಸ್ ಇಲ್ಲದೇ ಪರದಾಡುವಂತಾಗಿದೆ.
ವಿಧಾನಸಭೆ ಚುನಾವಣೆ
ಕಾರ್ಯಕ್ಕೆ ಸಾವಿರಾರು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಗಳನ್ನು ಪಡೆದುಕೊಳ್ಳಲಾಗಿದೆ. ಮತದಾನ ಮಾಡಲು ನಾಳೆ ಸಾರ್ವತ್ರಿಕ ರಜಾ ದಿನ ಘೋಷಿಸಿರುವುದರಿಂದ ಮತದಾರರು ಇಂದೇ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮತದಾನಕ್ಕೆ ಊರಿಗೆ ಹೋಗುವ ಪ್ರಯಾಣಿಕರು ಬೆಂಗಳೂರಿನಲ್ಲಿ ಬಸ್ ಇಲ್ಲದೇ ಪರದಾಡುವಂತಾಗಿದೆ.
ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಖ್ಯೆ ಕಡಿಮೆ ಇರುವ ಕಾರಣ ಖಾಸಗಿ ಬಸ್‌ಗಳ ಮೊರೆ ಹೋಗಿರುವ ಪ್ರಯಾಣಿಕರು ದುಪ್ಪಟ್ಟು ದರ ಕೊಟ್ಟು ತಮ್ಮ ಊರಿಗೆ ಹೋಗುತ್ತಿದ್ದಾರೆ. ಕೆಲವರು ಈಗಾಗಲೇ ಬುಕ್ ಮಾಡಿದ್ದಾರೆ. ಇದರ ದುಬಾರಿ ದರ ಕೊಟ್ಟು ಹೋಗದವರು ಕೆಎಸ್‌ಆರ್‌ಟಿಸಿ ಬಸ್ಸಿನ ಮೊರೆ ಹೋಗಿದ್ದಾರೆ. ಮಹಿಳೆಯರು, ಮಕ್ಕಳು, ವಯೋವೃದ್ಧರು ಬಸ್ ಸಿಗದೇ ಪರದಾಟುವಂತಾಗಿದೆ.
ನಾಳೆ ಬೆಳಗ್ಗೆ ೭ ಗಂಟೆಯಿಂದಲೇ ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಶುರುವಾಗಲಿದೆ. ನಾಳೆಯೇ ಊರುಗಳಿಗೆ ಹೋಗೋಕೆ ಕಷ್ಟವಾಗಬಹುದು ಎನ್ನುವ ಹಿನ್ನೆಲೆಯಲ್ಲಿ ಒಂದು ದಿನ ಮುಂಚೆ ಬಸ್ ಹತ್ತುತ್ತಿದ್ದಾರೆ.
ಮತದಾನದ ಹಿನ್ನೆಲೆಯಲ್ಲಿ ಸಾವಿರಾರು ಪ್ರಯಾಣಿಕರು ಬೆಂಗಳೂರಿನ ಹಲವು ಬಸ್ ನಿಲ್ದಾಣಕ್ಕೆ ಧಾವಿಸಿದ್ದಾರೆ. ಬೆಂಗಳೂರಿನ ಬಹುತೇಕ ಬಸ್ ನಿಲ್ದಾಣಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ.
ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದಿರುವ ಪ್ರಯಾಣಿಕರು ಹಾಸನ, ತುಮಕೂರು, ಮಂಡ್ಯ, ಶಿರಾ, ಚಿತ್ರದುರ್ಗ, ಮೈಸೂರು, ರಾಮನಗರ ಭಾಗಕ್ಕೆ ತೆರಳುತ್ತಿದ್ದಾರೆ. ಬಸ್‌ಗಳು ನಿಲ್ದಾಣಕ್ಕೆ ಬಂದ ಕೂಡಲೇ ಕೆಲವೇ ಕ್ಷಣದಲ್ಲಿ ತುಂಬಿ ಹೋಗುತ್ತಿವೆ. ಕೆಲ ಊರುಗಳಿಗೆ ತೆರಳಲು ಬಸ್ ಸಿಕ್ಕಿದರೆ, ಕೆಲವು ಭಾಗಗಳಿಗೆ ತೆರಳಲು ಜನರು ಬಸ್‌ಗಾಗಿ ಕಾದು ಕುಳಿತಿದ್ದಾರೆ.
ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಸೀಟ್ ಹಿಡಿಯಲು ನಾ ಮುಂದು, ತಾ ಮುಂದು ಅಂತಾ ಮುಗಿಬಿದ್ದಿದ್ದಾರೆ. ನೂಕು ನುಗ್ಗಲಿನಲ್ಲೇ ಬಸ್ ಸೀಟ್ ಹಿಡಿದ ಮತದಾರರು ತಮ್ಮ ಊರಿನತ್ತ ತೆರಳುತ್ತಿದ್ದಾರೆ. ಎಷ್ಟೋ ಜನರಿಗೆ ಸೀಟ್‌ಗಳು ಸಿಗದೆ ಪರದಾಡುತ್ತಿದ್ದಾರೆ. ನಾಳೆ ಬೆಳಗ್ಗೆವರೆಗೂ ಬಸ್ ನಿಲ್ದಾಣಗಳಲ್ಲಿ ಇದೇ ರೀತಿ ರಶ್ ಆಗುವ ಸಾಧ್ಯತೆ ಇದೆ. ಬಸ್‌ಗಳಲ್ಲಿ ಸೀಟ್ ಹಿಡಿಯಲು ಪ್ರಯಾಣಿಕರು ಹರಸಾಹಸ ಮಾಡುತ್ತಿದ್ದಾರೆ.
ನಾಳೆ ವೋಟ್ ಮಾಡಲು ಬೆಂಗಳೂರಿನ ಜನರು ಒಂದು ದಿನ ಮುಂಚೆಯೇ ತಮ್ಮ, ತಮ್ಮ ಊರುಗಳಿಗೆ ಹೊರಟಿದ್ದಾರೆ. ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಸೀಟ್ ಹಿಡಿಯಲು ನಾ ಮುಂದು, ತಾ ಮುಂದು ಅಂತಾ ಮುಗಿಬಿದ್ದಿದ್ದಾರೆ. ನೂಕು ನುಗ್ಗಲಿನಲ್ಲೇ ಬಸ್ ಸೀಟ್ ಹಿಡಿದ ಮತದಾರರು ತಮ್ಮ, ತಮ್ಮ ಊರಿನತ್ತ ತೆರಳುತ್ತಿದ್ದಾರೆ