ಬಸ್ ಸಂಚಾರ ಸಮಸ್ಯೆ: ಸೂಕ್ತ ವ್ಯವಸ್ಥೆ ಗೆ ಆಗ್ರಹ

ರಾಯಚೂರು, ಏ.೧- ತಾಲ್ಲೂಕಿನ ಯರಗೇರಾ ಬಸ್ ನಿಲ್ದಾಣದ ಮುಂಭಾಗದಲ್ಲಿ ತಳ್ಳುಬಂಡಿ, ತರಕಾರಿ,ಹಣ್ಣು ಬಂಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಪ್ರಯಾಣಿಕರಿಗೆ,ಬಸ್ ಸಂಚಾರಕ್ಕೆ ತೀವ್ರ ಸಮಸ್ಯೆ ಆಗಿದೆ.
ತಳ್ಳುವ ಬಂಡಿಗಳ ವ್ಯಾಪಾರದಿಂದ ಬಸ್ ತಂಗುದಾಣ ಕಾಣದಂತಾಗಿದೆ. ಕರ್ನೂಲು, ಹೈದ್ರಾಬಾದ್, ಗದ್ವಾಲ್, ತಿರುಪತಿ, ಅಮರಾವತಿ ಬಸ್ ಗಳು ಇದೆ ರಸ್ತೆಯಲ್ಲಿ ಸಂಚರಿಸುತ್ತವೆ ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಪ್ರಯಾಣಿಕರ ಒತ್ತಾಯವಾಗಿದೆ.