ಬಸ್-ಬೈಕ್ ನಡುವೆ ಡಿಕ್ಕಿ: ಇಬ್ಬರ ಸಾವು

ವಿಜಯಪುರ,ಸೆ.13-ಸಿಂದಗಿ ತಾಲೂಕಿನ ಯಂಕಂಚಿ ಬಳಿ ಬೈಕ್ ಹಾಗೂ ಬಸ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವನ್ನಪ್ಪಿದ್ದು, ಇನ್ನೋರ್ವ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ.
ಸಿಂದಗಿಯಿಂದ ಶಹಾಪೂರ ಕಡೆಗೆ ಹೊರಟಿದ್ದ ಬಸ್ ಹಾಗೂ ಯಂಕಂಚಿಯಿಂದ ಸಿಂದಗಿಯತ್ತ ಹೊರಟಿದ್ದ ಬೈಕ್ ನಡುವೆ ನಡೆದ

ಅಪಘಾತದಲ್ಲಿ ಬೈಕ್ ಸವಾರರಾದ ಯಂಕಂಚಿಯ ರಮೇಶ ಗೌಡಪ್ಪ ಮುಳಸಾವಳಗಿ (35) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಬ್ಯಾಕೋಡ ಗ್ರಾಮದ ತಿಪ್ಪಣ್ಣ ಭೈರೋಡಗಿ (30) ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವೀಗಿಡಾಗಿದ್ದಾನೆ.
ಇನ್ನೋರ್ವ ಯುವಕ ಶಿವಪ್ಪ ಕುರನಳ್ಳಿ (28) ಗಂಭೀರವಾಗಿ ಗಾಯಗೊಂಡಿದ್ದು, ಸಿಂದಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂದಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿಂದಗಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.