
ವಿಜಯಪುರ,ಮೇ 22: ಸರ್ಕಾರಿ ಬಸ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ಓರ್ವ ಬೈಕ್ ಸವಾರ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಉತ್ನಾಳ ಕ್ರಾಸ್ ಬಳಿ ರವಿವಾರ ನಡೆದಿದೆ.
31 ವರ್ಷದ ಲಾಲು ಪವಾರ ಮೃತಪಟ್ಟಿರುವ ದುರ್ದೈವಿ. ನೀಲಕಂಠ
ಬಾಗೇವಾಡಿ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಪೆÇಲೀಸರುಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನಗೂಳಿ ಪೆÇಲೀಸ ಠಾಣಾವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.