ಬಸ್ ಬೆಂಕಿಗೆ ಆಹುತಿ ೧೨ ಮಕ್ಕಳು ಸೇರಿ ೪೫ ಮಂದಿ ಸಾವು

ನವದೆಹಲಿ,/ ಸೋಫಿಯಾ, ನ.೨೩- ಪ್ರವಾಸಿಗರಿದ್ದ ಬಸ್‌ಗೆ ಆಕಸ್ಮಿಕ ಬೆಂಕಿ ತಗುಲಿ ೧೨ ಮಕ್ಕಳು ಸೇರಿದಂತೆ ೪೫ ಮಂದಿ ಸುಟ್ಟು ಕರಕಲಾಗಿರುವ ಘಟನೆ ಪಶ್ಚಿಮ ಬಲ್ಗೇರಿಯಾದದ ಸೋಫಿಯಾದಲ್ಲಿ ಇಂದು ನಡೆದಿದೆ.
ಹೆದ್ದಾರಿಯಲ್ಲಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಸ್‌ನಿಂದ ಹೊರಗೆ ಬರಲಾರದೆ ಹಲವು ಮಂದಿ ಒಳಗೆ ಸಿಕ್ಕಿ ಮೃತಪಟ್ಟಿದ್ದಾರೆ. ಇನ್ನೂ ಹಲವು ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.
ಏಳಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಭೇಟಿಯಾದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಅದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಹೆದ್ದಾರಿಯಲ್ಲಿ ಬಸ್ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಈ ದುರ್ಘಟನೆ ನಡೆದಿದೆ. ಬೆಂಕಿ ಕಾಣಿಸಿಕೊಳ್ಳಲು ಕಾರಣ ತಿಳಿದುಬಂದಿಲ್ಲ ಈ ಸಂಬಂಧ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಒಳನಾಡು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ಸಮಯದಲ್ಲಿ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಈ ಅವಘಡ ಸಂಭವಿಸಿದೆ. ದಾರಿ ಮಧ್ಯದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಕ್ಕಪಕ್ಕದ ವಾಹನಗಳಿಗೂ ಬೆಂಕಿ ತಗುಲಿದೆ ಎಂದು ತಿಳಿಸಲಾಗಿದೆ.
ಒಳನಾಡು ಸಚಿವ ಬೊಯೋಕೋ ರಶ್ ಕೋ ಪ್ರತಿಕ್ರಿಯೆ ನೀಡಿ ಹವಾನಿಯಂತ್ರಿತ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬಾಗಿಲು ಹಾಕಿದ್ದರಿಂದ ತಕ್ಷಣಕ್ಕೆ ಹೊರಬರಲು ಸಾಧ್ಯವಾಗದೆ. ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ.
ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿರುವ ಚಿತ್ರ ನೋಡಿದರೆ ಅದರಲ್ಲಿರುವ ಮಂದಿ ಬೂದಿಯಾಗಿದ್ದಾರೆ.ಇದು ಮನಕುಲಕುವ ಘಟನೆ ಎಂದು ತಿಳಿಸಿದ್ದಾರೆ

ಪ್ರಧಾನಿ ತೀವ್ರ ಸಂತಾಪ:


ಪ್ರವಾಸಿಗರಿಂದ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡು ೧೨ ಮಕ್ಕಳು ಸೇರಿದಂತೆ ೪೫ ಮಂದಿ ಸುಟ್ಟು ಕರಕಲಾಗಿರುವ ಘಟನೆಗೆ ಬಲ್ಗೇರಿಯಾದ ಹಂಗಾಮಿ ಪ್ರಧಾನಿ ಸ್ಟಫೆನ್ ಯನ್ ವೇವ್ ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಮಂದಿ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿರವ ಅವರು ಮೃತಪಟ್ಟ ಕುಟುಂಬಗಳ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.