ಬಸ್ ಬಿಡಲು ಸಾರಿಗೆ ಸಚಿವರಿಗೆ ಬಯ್ಯಾಪುರ ಮನವಿ

ಲಿಂಗಸುಗೂರು,ಜು.೧೯-
ತಾಲೂಕಿನ ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಿನ ವ್ಯಾಸಂಗಕ್ಕಾಗಿ ದೂರದ ಊರುಗಳಿಗೆ ಹೋಗಬೇಕಾದರೆ ಸೆಂಟರ್ ಪಾಯಿಂಟ್ ಇರುತ್ತದೆ. ಆದರೆ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಬಸ್ ಸೌಕರ್ಯ ಇಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಅಲ್ಲದೆ ಮೈಸೂರು ದಸರಾ ವೀಕ್ಷಣೆಗೆ ಲಿಂಗಸುಗೂರು ತಾಲೂಕಿನ ಹಲವಾರು ಸಾರ್ವಜನಿಕರು ಹೊಗುವದು ಸಾಮಾನ್ಯವಾಗಿದೆ.
ಆದರೂ ಸರಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಲಿಂಗಸುಗೂರು ತಾಲ್ಲೂಕಿನ ಜನರ ಬೇಡಿಕೆಗೆ ಅನುಗುಣವಾಗಿ ಪ್ರತ್ಯೇಕ ಹವಾನಿಯಂತ್ರಿತ ಬಸ್ ವ್ಯವಸ್ಥೆ ಮಾಡಬೇಕು ಎಂದು ರಾಯಚೂರು ಕೊಪ್ಪಳ ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ರವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಮೈಸೂರು ಭಾಗದಲ್ಲಿ ಅನೇಕ ವಿದ್ಯಾ ಸಂಸ್ಥೆಗಳದ್ದು, ಸದರಿ ವಿದ್ಯಾ ಸಂಸ್ಥೆಗಳಗೆ ಲಿಂಗಸಗೂರು ಮತ್ತು ಸಿಂಧನೂರು ತಾಲ್ಲೂಕಿನ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಮೈಸೂರಿಗೆ ಪ್ರಯಾಣಿಸಲು ಸರಿಯಾದ ಬಸ್ಸಿನ ಸೌಕರ್ಯವಿರುವುದಿಲ್ಲ. ಆದರೆ ಸಿಂಧನೂರು ಪಟ್ಟಣದಿಂದ ಮೈಸೂರಿಗೆ ಬಸ್ಸುಗಳು ಕಾರ್ಯಾಚರಣೆಯಲ್ಲಿರುತ್ತದೆ.
ಆದರೆ ಲಿಂಗಸಗೂರು ತಾಲ್ಲೂಕಿನ ಹಟ್ಟಿ, ಮುದಗಲ್ ಹಾಗೂ ಸುರಪುರ ತಾಲ್ಲೂಕಿನ ಹುಣಸುಗಿ ಮತ್ತು ತಾಳಿಕೋಟೆ ತಾಲ್ಲೂಕಿನ ಪ್ರಯಾಣಿಕರು ಸಿಂಧನೂರಿಗೆ ತೆರಳಿ ಅಲ್ಲಿಂದ ಮೈಸೂರಿಗೆ ತೆರಳುವ ಪ್ರಸಂಗವಿರುತ್ತದೆ.
ಇದರಿಂದ, ವಿದ್ಯಾರ್ಥಿಗಳಿಗೆ ಹಾಗೂ ಪೋಷಕರು. ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ.ಆದ ಕಾರಣ ಸದರಿ ತೊಂದರೆಯನ್ನು ತಪ್ಪಿಸಲು ಸಿಂಧನೂರು ಪಟ್ಟಣದಿಂದ ಚಲಿಸುತ್ತಿರುವ ಬದಲಾಗಿ ಲಿಂಗಸಗೂರು ಪಟ್ಟಣದಿಂದ ಮೈಸೂರು ನಗರಕ್ಕೆ ಮಾರ್ಗವನ್ನು ಹೊಸದಾಗಿ ವಿಸ್ತರಿಸಿ, ಹವಾನಿಯಂತ್ರಿತ ಹವಾನಿಯಂತ್ರಿತವಲ್ಲದ ಸ್ಲೀಪಿಂಗ್ ಕೋಚ್ ಬಸ್‌ಗಳನ್ನು ಕಾರ್ಯಾಚರಣೆಗೊಳಸಲು ಹಾಗೂ ಪ್ರಸ್ತುತ ಲಿಂಗಸಗೂರು ಪಟ್ಟಣದಿಂದ ಬೆಂಗಳೂರು ಮಹಾನಗರಕ್ಕೆ ಸಂಚಲಿಸುತ್ತಿರುವ ಹವಾನಿಯಂತ್ರಿತವಲ್ಲದ ’ಬಸ್ಸುಗಳು ತುಂಬಾ ಹಳೆಯದಾಗಿದ್ದು, ಅವುಗಳ ಬದಲಾಗಿ ಹವಾನಿಯಂತ್ರಿತ ಬಸ್ಸುಗಳನ್ನು ಹೊಸದಾಗಿ ಕಾರ್ಯಾಚರಣೆಗೊಳಿಸಲು ರಾಮಲಿಂಗಾ ರೆಡ್ಡಿ ಸಾರಿಗೆ ಹಾಗೂ ಮುಜರಾಯಿ ಸಚಿವರು. ಕರ್ನಾಟಕ ಸರ್ಕಾರಕ್ಕೆ ಮನವಿಯನ್ನು ರಾಯಚೂರು ಮತ್ತು ಕೊಪ್ಪಳದ ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಎ. ಪಾಟೀಲ್ ಬಯ್ಯಾಪುರ ಸಲ್ಲಿಸಿದ್ದಾರೆ.