ಬಸ್ ಬಂದ್ – ಪ್ರಯಾಣಿಕರ ಪರದಾಟ

ಕಾಳಗಿ. ಏ.7: ಪಟ್ಟಣದ ಸಾರಿಗೆ ನೌಕರರ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ದೊರತಿದೆ. ಇಲ್ಲಿನ ಡಿಪೋದಿಂದ ಒಂದೂ ಬಸ್ ಬುಧವಾರ ರಸ್ತೆಗೆ ಇಳಿಯಲಿಲ್ಲ.

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿಲ್ಲ. ಸಿಬ್ಬಂದಿ ಕೆಲಸಕ್ಕೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಜನರು ಕಾದುಕುಳಿತಿದ್ದರು.

ಆದರೆ ಸಿಬ್ಬಂದಿ ನಿಲ್ದಾಣಗಳತ್ತ ಸುಳಿಯುತ್ತಿಲ್ಲ.
ಬಸ್ ನಿಲ್ದಾಣಗಳಿಗೆ ಬೇರೆ ಊರಿಗೆ ತೆರಳಲು ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಮತ್ತು ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರು ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿದೆ.
ಯಾವುದೇ ಅಹಿತಕರ ಘಟನೆ ಯಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.