ಬಸ್ ನಿಲ್ದಾಣ : ರೈತನ 5 ಲಕ್ಷ ರೂ. ಕಳುವು

ಸಿಂಧನೂರು.ನ.13- ಒಣ ಮೆಣಸಿನಕಾಯಿ ಮಾರಿಕೊಂಡು ಮನೆಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದ ರೈತನ 5 ಲಕ್ಷ 91 ಸಾವಿರ ರೂ ಹಣವನ್ನು ಎಗರಿಸಿದ ಘಟನೆ ನಗರದ ಬಸ್ ನಿಲ್ದಾಣದಲ್ಲಿ ನ.12 ರಂದು ಸಂಜೆ 4-00 ಗಂಟೆಗೆ ನಡೆದಿದೆ.
ಗಂಗಾವತಿ ತಾಲೂಕಿನ ಬೂದುಗುಂಪಾ ಗ್ರಾಮದ ಹನುಮಂತಪ್ಪ ಅಗಸರ ಹಣ ಕಳೆದುಕೊಂಡ ‌ರೈತನಾಗಿದ್ದಾನೆ. ಕೈಚೀಲದಲ್ಲಿದ್ದ ಹಣವನ್ನು ಬ್ಲೇಡ್ ನಿಂದ ಕಳ್ಳರು ಕತ್ತರಿಸಿ ಹಣ ತೆಗದುಕೊಂಡಿದ್ದನ್ನು ನೋಡಿ ಹನುಮಂತಪ್ಪ ಬಸ್ ನಿಲ್ದಾಣದ ತುಂಬೆಲ್ಲಾ ನನ್ನ ಹಣ ಕಳುವಾಗಿದೆ‌, ಯಾರಾದರೂ ನೋಡಿದಿರಾ ಎಂದು ಪ್ರತಿಯೊಬ್ಬ ಪ್ರಯಾಣಿಕರ ಹತ್ತಿರ ಅಳುತ್ತಾ ತಿರುಗಾಡುತ್ತಿದ್ದ, ಈ ದೃಶ್ಯ ಎಂತಹವರಿಗಾದರೂ ಕಣ್ಣಲ್ಲಿ ತರಿಸುವಂತಹ ಘಟನೆಯಾಗಿದೆ.
ನಗರದ ಕುಷ್ಟಗಿ ರಸ್ತೆಯಲ್ಲಿರುವ ಒಣ ಮೆಣಸಿನಕಾಯಿ ಮಾರುಕಟ್ಟೆಗೆ ಬಂದು ಮೆಣಸಿನಕಾಯಿ ಮಾರಾಟ ಮಾಡಿ ಬಂದ 5 ಲಕ್ಷ 91 ಸಾವಿರ ರೂ.ಹಣವನ್ನು ತನ್ನ ಕೈ ಚೀಲದಲ್ಲಿ ಇಟ್ಟುಕೊಂಡು ‌ಬಸ್ ನಿಲ್ದಾಣದಕ್ಕೆ ಬಂದು ಬೂದುಗುಂಪಿಗೆ ಹೋಗಲು ಬಸ್ ಹತ್ತುವಾಗ 3-4 ಜನರ ಅಪರಿಚಿತರು ಪ್ರಯಾಣಿಕ ಸೊಗಿನಲ್ಲಿ‌ ಬಸ್ ಹತ್ತುವ ನೆಪದಲ್ಲಿ ಹನುಮಂತಪ್ಪ ನನ್ನು ತಳ್ಳಾಡಿ ಆತನ ಪ್ರಜ್ಞೆ ‌ಬೇರೆ ಕಡೆ ಸೆಳೆದು‌ ಆತನ ಕಂಕುಳದಲ್ಲಿ‌ ಭದ್ರವಾಗಿ ಇಟ್ಟುಕೊಂಡು ಕೈ ಚೀಲಕ್ಕೆ ಕಳ್ಳರು ಕತ್ತರಿ ಹಾಕಿ ಹಣ ಒಡೆದು ಓಡಿ ಹೋಗಿದ್ದು , ಹನುಮಂತಪ್ಪ ಬಸ್ ನ ಒಳಗಡೆ ಹೋಗಿ ಸಿಟ್ ನಲ್ಲಿ ಕೂಡುವಾಗ ಕೈ ಚೀಲದ ಬಾರ ಕಡಿಮೆ ಯಾಗಿದ್ದ ನ್ನು ನೋಡಿ ಅನುಮಾನಗೊಂಡು ಕೈ ಚೀಲ ನೋಡಿದಾಗ ಅದಕ್ಕೆ ಕತ್ತರಿ ಹಾಕಿ ಹಣ ಕಳುವಾದ ಬಗ್ಗೆ ಗೊತ್ತಾಗಿದೆ.
ಕೈ ಚೀಲದಲ್ಲಿ ಹಣ ಇಲ್ಲದನ್ನು ನೋಡಿ ಗಾಬರಿಗೊಂಡ ಹನುಮಂತಪ್ಪ ಬಸ್ ನಿಲ್ದಾಣದ ತುಂಬೆಲ್ಲಾ ಓಡಾಡಿ “ನನ್ನ ಹಣ ಕಳ್ಳತನವಾಗಿದೆ ಯಾರಾದರೂ ನೋಡಿದ್ದಿರಾ ಎಂದು ಬಸ್ ನಿಲ್ದಾಣದ ತುಂಬೆಲ್ಲಾ ಅಳುತ್ತಾ ಓಡಾಡುತ್ತಿರುವಾಗ ಮೂರು ಜನ ಬಸ್ ನಿಂದ ಇಳಿದು ಓಡಿ ಹೋದರು ಎಂದು ಪ್ರಯಾಣಿಕರು ‌ನನಗೆ ತಿಳಿಸಿದರು ಎಂದು ಹಣ ಕಳೆದುಕೊಂಡ ‌ಹನುಮಂತಪ್ಪ ಪತ್ರಿಕೆಗೆ ತಿಳಿಸಿದನು.
ಬಸ್ ನಿಲ್ದಾಣದಲ್ಲಿ ‌ರೈತನ 5 ಲಕ್ಷ ,90 ಸಾವಿರ ರೂ ಹಣ ಸಂಜೆ 4-00 ಗಂಟೆಗೆ ಕಳುವಾದ ವಿಷಯ ‌ತಿಳಿದು ನಗರ ಠಾಣೆಯ ಪಿಎಸ್ಐ ವಿಜಯಕೃಷ್ಣ ನೇತೃತ್ವದಲ್ಲಿ ಕ್ರೈಂ ಪೋಲಿಸರು ಬಸ್ ನಿಲ್ದಾಣಕ್ಕೆ ಆಗಮಿಸಿ ರೈತನೊಂದಿಗೆ ನಿಲ್ದಾಣದ ಸಿಸಿ ಕ್ಯಾಮಾರಾ ವಿಕ್ಷಿಸಿ ಪ್ರಕರಣ ದಾಖಲಿಸಿಕೊಂಡು ಕಳ್ಳನ ಪತ್ತೆಗಾಗಿ ಜಾಲ ಬಿಸಿದ್ದಾರೆ.
ವಾರದ ಹಿಂದೆ ಇದೆ ನಿಲ್ದಾಣದಲ್ಲಿ ಕಳ್ಳನೊಬ್ಬ ಸಾರ್ವಜನಿಕರ ಬೈಕ್ ಕಳ್ಳತನ ಮಾಡಿ ತೆಗೆದುಕೊಂಡು ಹೋಗುವಾಗ ಕ.ರ.ವೆ ಸಂಘಟನೆ ಮುಖಂಡರು ಬೈಕ್ ಕಳ್ಳನನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ.