ಬಸ್ ನಿಲ್ದಾಣ: ರಾಮದಾಸ್ ಸ್ಪಷ್ಟನೆ


ಮೈಸೂರು: ನ.16:- ಗುಂಬಜ್ ಮಾದರಿಯ ಬಸ್ ನಿಲ್ದಾಣ ತೆರವು ವಿಚಾರ ವಿವಾದಕ್ಕೆ ಕಾರಣ ಆಗುತ್ತಿರುವ ಹಿನ್ನೆಲೆಯಲ್ಲಿ ನಿಲ್ದಾಣದ ಕುರಿತು ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟನೆ ನೀಡಿದ್ದಾರೆ.
ಈ ವಿವಾದ ಬೆಳಕಿಗೆ ಬರುತ್ತಿದ್ದಂತೆ ನಗರದ ಪೆÇಲೀಸರಿಗೆ ಪತ್ರದ ಮೂಲಕ ದೂರು ನೀಡಿ
ಸೂಕ್ತ ಕ್ರಮವಹಿಸಲು ಪತ್ರ ಬರೆಯಲಾಗಿದೆ. ಮೈಸೂರಿನಲ್ಲಿ ಈಗಾಗಲೇ ಹಲವಾರು ಸ್ಥಳಗಳಲ್ಲಿ ಇದೇ ಮಾದರಿಯ ಬಸ್ ತಂಗುದಾಣಗಳಿದ್ದು, ಅದರ ವಿನ್ಯಾಸದ ಆದಾರದ ಮೇಲೆ ನಮ್ಮ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ವಿವಿಧ ವಿನ್ಯಾಸದೊಂದಿಗೆ ಬಸ್
ತಂಗುಂದಾಣವನ್ನು ನಿರ್ಮಿಸಲಾಗುತ್ತಿದೆ. ಬಸ್ ತಂಗುದಾಣದ ಕಾಮಗಾರಿಯನ್ನು ಗುತ್ತಿಗೆದಾರ ಮಹದೇವ್ ದಂತ ಕಕ್ಷನ್ ಎಂಬ ಹೆಸರಿನಲ್ಲಿ ನಿರ್ಮಿಸುತ್ತಿದ್ದಾರೆ. ಕಾಮಗಾರಿ ಪ್ರಗತಿಯಲ್ಲಿದ್ದು ತಂಗುದಾಣದ ಒಳಗೆ ಎಲ್.ಇ.ಡಿ ಸ್ಟೀನ್ ಕೂಡ ಅಳವಡಿಸಿ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ವಿಶೇಷವಾಗಿ ಉಪಯುಕ್ತ ಮಾಹಿತಿಗಳನ್ನು ನೀಡಲಾಗುವುದು. ಪ್ರಸ್ತುತ ಕಾಮಗಾರಿಯಲ್ಲಿ 60 ರಷ್ಟು ಮಾತ್ರ ಮುಗಿದಿದ್ದು, ಹಂತಹಂತವಾಗಿ ಕಾಮಗಾರಿ ನಡೆಯುತ್ತಿದೆ. ಬಸ್ ತಂಗುದಾಣವನ್ನು ಪಾರಂಪರಿಕವಾಗಿ ಕಾಣುವ ದೃಷ್ಟಿಯಿಂದ ನಿರ್ಮಿಸಲಾಗುತ್ತಿದೆಯೇ ಹೊರತು ಇದರಲ್ಲಿ ಯಾವುದೇ ಧರ್ಮದ ಆಧಾರದ ಮೇಲೆ ನಿರ್ಮಿಸಲಾಗುತ್ತಿಲ್ಲ ಎಂದು ಈ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.
ಅರಮನೆ, ಮಾದರಿಯಲ್ಲಿ ಬಸ್ ತಂಗುದಾಣ ನಿರ್ಮಿಸಲು ವಿನ್ಯಾಸವನ್ನು ಈಗಾಗಲೇ ಮೈಸೂಲನ ಹಲವಾರು ಕಡೆ ಇರುವಂತಹ ರೀತಿಯಲ್ಲಿ ತಯಾರಿಸಲಾಗಿದ್ದು, ಈ ವಿನ್ಯಾಸದಿಂದ ವಿವಾದಗಳಾಗಲಿದೆ ಎಂದು ಕಂಡು ಬಂದಲ್ಲಿ ಸಂಬಂಧಿಸಿದಂತೆ ಒಂದು ತಜ್ಞರ ಸಮಿತಿಯನ್ನು ರಚನೆ ಮಾಡಿ ಸಮಿತಿಯವರು ಬಂದು ನೋಡಿ ವರದಿನೀಡಲು ಮನವಿ ಮಾಡಲಾಗಿದ್ದು, ಸಮಿತಿಯ ವರದಿಯಲ್ಲಿ ತಪ್ಪಿದೆ ಎಂದು ಆನಿಸಿದ್ದಲ್ಲಿ ಬದಲಾವಣೆ ಮಾಡಲು ನಮ್ಮದೇನು ಅಭ್ಯಂತರವಿಲ್ಲ ಎಂದು ತಿಳಿಸಿದ್ದಾರೆ.