ಬಸ್ ನಿಲ್ದಾಣ ಕಾಮಗಾರಿ ನಿಧಾನ : ತರಾಟೆಗೆ ತೆಗೆದುಕೊಂಡ ಶಾಸಕ

ಲಿಂಗಸುಗೂರು,ಮೇ.೧೪-ಪಟ್ಟಣದಲ್ಲಿ ನೂತನ ಬಸ್ ನಿಲ್ದಾಣಕ್ಕೆ ಶಾಸಕ ಡಿ.ಎಸ್.ಹೂಲಗೇರಿ ಗುರುವಾರ ಬೇಟಿ ನೀಡಿ ಪರಿಶೀಲಿಸಿದರು.
ಬಸ್ ನಿಲ್ದಾಣ ಕಾಮಗಾರಿ ಮುಗಿಸೋಕೆ ಎಷ್ಟು ದಿನ ಬೇಕು. ನಮ್ಮ ನಿರೀಕ್ಷೆಯಂತೆ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿಲ್ಲ, ಇನ್ನೂ ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ..? ಬಸ್ ನಿಲ್ದಾಣ ಉದ್ಘಾಟನೆ ಮಾಡುವುದು ಯಾವಾಗ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಕಾಮಗಾರಿ ಪೂರ್ಣಗೊಂಡಿಲ್ಲ ಆಗಲೇ ಕೆಲವಡೆ ಸೋರುತ್ತಿದೆ. ಇನ್ನೂ ಸಣ್ಣ ಪುಟ್ಟ ಕೆಲಸಗಳು ಬಾಕಿ ಇವೆ. ಈಗಾಗಲೇ ಮಾಡಿರುವ ಸುಣ್ಣಬಣ್ಣ ಮಾಸಿಹೋಗಿದೆ. ಗೋಪುರ ಮಾಡಲಾಗಿದೆ ಆದರೆ ಬಣ್ಣ ಹಚ್ಚಿಲ್ಲಾ. ಅನುದಾನ ಕೊರತೆಯಿತ್ತು ಸಮ್ಮೀಶ್ರ ಸರ್ಕಾರದ ಅವಧಿಯಲ್ಲಿ ೧.೫೦ ಕೋಟಿ ರೂಪಾಯಿ ಬಿಡುಗಡೆ ಮಾಡಿಸಿದ್ದೇ ಆ ಅನುದಾನ ಸಾಕಾಗೋಲ್ಲ ಎಂದು ವಾಪಸ್ಸು ಕಳಿಸಿದಿರೀ ಎಂದು ಎತರರನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್, ಪುರಸಭೆ ಉಪಾಧ್ಯಕ್ಷ ಮಹ್ಮದ್ ರಫಿ, ಪರಶುರಾಮ ನಗನೂರು, ಘಟಕದ ವ್ಯವಸ್ಥಾಪಕ ಆದಪ್ಪ ಕುಂಬಾರ ಸೇರಿದಂತೆ ಇನ್ನಿತರಿದ್ದರು.