
ಸಿರವಾರ,ಮಾ.೧೦-
೧೦ ತಿಂಗಳಲ್ಲಿ ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿ ೧.೫ ವರ್ಷವಾದರೂ ೩೦% ಕಾಮಗಾರಿ ಮಾಡಲಾಗಿದ್ದೂ, ಉಳಿದ ಕಾಮಗಾರಿ ಯಾವಾಗ ಆಗುತ್ತದೆ, ಕಾಮಗಾರಿ ಸ್ಥಳಕ್ಕೆ ಅದಿಕಾರಿಗಳು ಆಗಾಗ ಬೇಟಿ ನೀಡಿದರೆ ಈ ರೀತಿಯಾಗುತ್ತಿದಿಲ, ಗುತ್ತೆದಾರರನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಎನ್.ಇ.ಕೆ.ಎಸ್.ಆರ್.ಟಿ.ಸಿ ಅದಿಕಾರಿ ಮೇಲೆ ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಗರಂ ಆಗಿ ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ಸಂಜೆ ಜರುಗಿತು.
ಪಟ್ಟಣದಲ್ಲಿರುವ ಬಸ್ ನಿಲ್ದಾಣದ ಕಾಮಗಾರಿಯು ೩ ಕೊ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ, ಕಾಮಗಾರಿ ನಿಗದಿತ ಸಮಯಕ್ಕೆ ಆಗುತ್ತಿಲ, ವಿಳಂಬವಾಗುತ್ತಿದೆ ಎಂದು ಮುಖಂಡರು, ಸಾರ್ವಜನಿಕ ಅರೊಪ ಮಾಡಿದ ಹಿನ್ನೆಲೆಯಲ್ಲಿ ವೀಕ್ಷಣೆಯಲ್ಲಿ ಮಾತನಾಡಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಲ್ಲಿ ಮೂರು ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದೆ. ಹತ್ತು ತಿಂಗಳಲ್ಲಿ ಮುಗಿಯಬೇಕಾದ ಕಾಮಗಾರಿ ಇನ್ನೂ ಮುಗಿದಿಲ್ಲ, ಯಾಕೆ, ನಿವೂ ಏಷ್ಟು ಬಾರಿ ಕಾಮಗಾರಿ ಸ್ಥಳಕ್ಕೆ ಬಂದಿದಿರಿ, ಗುತ್ತಿಗೆದಾರರ ನಿರ್ಲಕ್ಷದಿಂದ ವಿಳಂಭವಾಗುತ್ತಿದೆ, ಗುತ್ತೆದಾರ ಲೈಸನ್ಸ್ ಕಪ್ಪು ಪಟ್ಟಿಗೆ ಸೇರಿಸಿ, ಕಾಮಗಾರಿ ಪೂರ್ಣಗೊಂಡಿದರೆ ಇನೂ ಹೆಚ್ಚಿನ ಅನುದಾನ ನೀಡುತ್ತಿದೆ. ಈ ನಿಲ್ದಾಣವುಸಾರ್ವಜನಿಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ತೊಂದರೆ ಯಾಗಿದೆ, ಹೈದ್ರಾಬಾದ್- ಗೋವಾ ರಾಜ್ಯ ಹೆದ್ದಾರಿಗೆ ಹೊಂದಿ ಕೊಂಡಿದೆ ಅದಿಕ ಪ್ರಯಾಣಿಕ ಓಡಾಟ ಇದೇ. ಬೇಗ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ರಸ್ತೆ ಸಾರಿಗೆ ಇಲಾಖೆಯ ಸಹಾಯಕ ಅಭಿಯಂತರಾದ ಅಣ್ಣಪ್ಪ ಅವರನ್ನು ಹಿಗ್ಗಾ ಮುಗ್ಗು ತರಾಟೆಗೆ ತೆಗೆದುಕೊಂಡು, ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವದು, ತ್ವರಿತವಾಗಿ ಕಾಮಗಾರಿ, ಗುಣಮಟ್ಟದ ಮೂಲಕ ಕಾಮಗಾರಿ ಮುಗಿಸಿ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಜಿ.ಲೋಕರಡ್ಡಿ, ಎಂ.ಡಿ.ವಲಿಸಾಬ್, ರಾಮಚಾರಿ, ನಾಗರಾಜ, ಬಂದೇನವಾಜ, ಸೂರಿ ಹುಸೇನಪ್ಪ,ಶಾಂತಪ್ಪ , ಷರೀಪ್ ಮರಾಟ, ರಾಹುಲ್ ಸೇರಿದಂತೆ ಅನೇಕರು ಇದ್ದರು.