ಬಸ್ ನಿಲ್ದಾಣದ ಶೌಚಾಲಯದಲ್ಲಿ ಹಣ ವಸೂಲಿ

ಚಿತ್ತಾಪುರ: ಜ.2: ಶೌಚಾಲಯಗಳು ಮೂಲಭೂತ ಹಕ್ಕಾಗಿದ್ದರೂ ಬಸ್ ನಿಲ್ದಾಣದ ಸ್ಥಳಗಳಲ್ಲಿ ಮೂತ್ರ ವಿಸರ್ಜನೆಗೆ ಉಚಿತ ಸೇವೆ ನೀಡಬೇಕಾದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಸೌಚಾಲಯಗಳು ಟೆಂಡರ್ ನೀಡಿದ್ದರಿಂದ ಅವರು ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ.

ಪಟ್ಟಣದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದಲ್ಲಿ ಶೌಚಾಲಯವಿದ್ದು ಆ ಶೌಚಾಲಯ ಟೆಂಡರ್ ಆಗಿರುವುದರಿಂದ ಟೆಂಡರ್ ತೆಗೆದುಕೊಂಡವರು ಪುರುಷರಿಗೆ ಮೂತ್ರವಿಸರ್ಜನೆಗೆ ಉಚಿತವಾಗಿದೆ ಆದರೆ ಮಹಿಳೆಯರಿಗೆ ಮೂತ್ರ ವಿಸರ್ಜನೆಗೆ ಹಣ ತೆಗೆದುಕೊಳ್ಳುತ್ತಿದ್ದಾರೆ ಇದು ಯಾವ ನ್ಯಾಯ. ಅಷ್ಟೇ ಅಲ್ಲದೆ ಮಲ ವಿಸರ್ಜನೆಗೆ 5 ರೂಪಾಯಿ ತೆಗೆದುಕೊಳ್ಳಬೇಕು ಆದರೆ ಇಲ್ಲಿ 7 ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ.

ಇದರಿಂದಾಗಿ ಬಸ್ ನಿಲ್ದಾಣದ ಶೌಚಾಲಯಕ್ಕೆ ಮಹಿಳೆಯರು ಹೋಗದೆ ಬಸ್ ನಿಲ್ದಾಣದ ಅಕ್ಕಪಕ್ಕ ಮಹಿಳೆಯರು ಮೂತ್ರ ವಿಸರ್ಜನೆಗೆ ಹೋಗುತ್ತಿರುವುದು ಕಂಡುಬರುತ್ತಿದೆ. ಅಷ್ಟೇ ಅಲ್ಲದೆ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೂ ಸಹ ತುಂಬಾ ತೊಂದರೆಯಾಗುತ್ತಿದ್ದು ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಮಹಿಳೆಯರಿಗಾಗಿ ಉಚಿತವಾಗಿ ಮೂತ್ರ ವಿಸರ್ಜನೆಗೆ ಅವಕಾಶ ಮಾಡಿಕೊಡಬೇಕು.
ಹಾಗೂ ಶೌಚಾಲಯದಲ್ಲಿ ದುಪ್ಪಟ್ಟು ಹಣವನ್ನು ತೆಗೆದುಕೊಳ್ಳುತ್ತಿರುವುದು ನಿಲ್ಲಿಸಬೇಕು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಯಾಣಿಕರಾದ ಸಿದ್ದು ಕೋರಿ ಆಗ್ರಹಿಸಿದ್ದಾರೆ.


ಜನವರಿ 1ರಂದು ಶೌಚಾಲಯದವರ ಜೊತೆ ಯಾರೋ ಒಬ್ಬರು ಹೆಚ್ಚಿಗೆ ಹಣ ಏಕೆ ಕೊಡಬೇಕು ಎಂದು ಪ್ರಶ್ನಿಸಿದಾಗ ಅವರ ಜೊತೆ ಜಗಳವಾಡಿ ಒಂದು ದಿನಪೂರ್ತಿ ಶೌಚಾಲಯವನ್ನು ಮುಚ್ಚಿದ್ದರಿಂದ ಆ ದಿನ ಬಸ್ ನಿಲ್ದಾಣದಲ್ಲಿ ಎಲ್ಲಾ ಪ್ರಯಾಣಿಕರಿಗೆ ಮೂತ್ರ ವಿಸರ್ಜನೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ರೀತಿ ಆಗಬಾರದು ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.