ಬಸ್ ನಿಲ್ದಾಣದ ಬಳಿ ಗುಂಡಿ ಕ್ಯಾರೇ ಅನ್ನದ ಪುರಸಭೆ ಅಧಿಕಾರಿಗಳು

ಲಿಂಗಸುಗೂರು.ಮಾ.೨೩-ಪುರಸಭೆ ವ್ಯಾಪ್ತಿಯಲ್ಲಿ ಬರುವ ಬಸ್ ನಿಲ್ದಾಣದ ಹತ್ತಿರ ಇರುವ ಬಾರಿ ಗುಂಡಿ ಬಿದ್ದು ಬಿದ್ದು ಪುರಸಭೆ ಅಧಿಕಾರಿಗಳು ಕಣ್ಣಿಗೆ ಕಂಡರು ಕಾಣದಂತೆ ಇರುವ ಪುರಸಭೆ ಅಧಿಕಾರಿಗಳು ಬಸ್ ನಿಲ್ದಾಣದ ಬಳಿ ಗುಂಡಿ ಬಿದ್ದಿರುವುದು ಪತ್ತೆಯಾಗಿದೆ.
ಸಾರ್ವಜನಿಕರು ದಿನ ನಿತ್ಯ ತಿರಿಗಾಡುವ ಜನರು ಈ ಗುಂಡಿಯಲ್ಲಿ ಬಿದ್ದರೆ ಸಾಕು ಕೈ ಕಾಲು ಮುರಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ರಾತ್ರಿಯಾದರೆ ಯಾವುದೇ ಗುಂಡಿ ಬಿದ್ದಿರುವ ಕಣ್ಣಿಗೆ ಕಾಣುವುದಿಲ್ಲ ಇದರಿಂದ ಸಾರ್ವಜನಿಕರು ಪುರಸಭೆ ಆಡಳಿತದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಕುಡಲೇ ಅಧಿಕಾರಿಗಳು ಭೇಟಿ ಮಾಡಿ ಬಸ್ ನಿಲ್ದಾಣದ ಹೊರಗಡೆ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಮುಂದಾಗಬೆಕು ಇಲ್ಲದಿದ್ದರೆ ಬಿದಿಬದಿ ಇರುವ ವ್ಯಾಪಾರಿಗಳ ಮೂಲಕ ಆಡಳಿತ ವ್ಯವಸ್ಥೆ ವಿರುದ್ಧ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ವಾರ್ಡ್‌ನಲ್ಲಿ ತಗ್ಗು ದಿನ್ನಿ ಪ್ರದೇಶದಲ್ಲಿ ಗುಂಡಿ ಬಿದ್ದಿರುವ ಬಗ್ಗೆ ಅರಿತು ಅಧಿಕಾರಿಗಳು ಮುಂದಾಗದಿದ್ದರೆ ಬಿದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮ್ಮೈಭೂಬಪಾಶ ಹೋರಾಟ ಮಾಡಲಾಗುವುದು ಎಂದು ಪುರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.