ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಶಾಸಕ ಲಕ್ಷ್ಮಣ ಸವದಿ ಚಾಲನೆ

ಅಥಣಿ : ಅ.3:ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ ಸೇರಿದಂತೆ ಅನೇಕ ಸರ್ಕಾರಿ ಕಚೇರಿಗಳಲ್ಲಿ ಮತ್ತು ಸ್ಥಳಗಳಲ್ಲಿ ಸ್ವಚ್ಛತೆಯನ್ನ ಕಾಪಾಡುವ ಸಲುವಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕು.ಈ ನಿಟ್ಟಿನಲ್ಲಿ ಅಥಣಿ ಬಸ್ ನಿಲ್ದಾಣದ ಕಾಂಪೌಂಡ್ ಗೋಡೆಗಳ ಮೇಲೆ ಸ್ವಚ್ಛ ಭಾರತ ಜಾಗೃತಿ ಹಾಗೂ ಭಾರತ ದೇಶ ಮತ್ತು ಕರ್ನಾಟಕ ರಾಜ್ಯವನ್ನು ಸಾಂಸ್ಕøತಿಕ ಮತ್ತು ಐತಿಹಾಸಿಕವಾಗಿ ಪ್ರತಿನಿಧಿಸುವ ವಿಷಯಗಳನ್ನು ಚಿತ್ರಕಲೆಯ ಮೂಲಕ ಪ್ರದರ್ಶನಕ್ಕೆ ಮುಂದಾಗಿರುವ ಸ್ಥಳೀಯ ಬಣಜವಾಡ ಶಿಕ್ಷಣ ಸಂಸ್ಥೆಯ ಕಾರ್ಯವನ್ನು ಶಾಸಕ ಲಕ್ಷ್ಮಣ ಸವದಿ ಶ್ಲಾಘಿಸಿದರು.
ಅವರು ಅಥಣಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಣಜವಾದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಚಿತ್ರಕಲಾ ಶಿಕ್ಷಕರು ಸ್ವಚ್ಛ ಭಾರತದ ಅಭಿಯಾನ ಯೋಜನೆ ಜನಜಾಗೃತಿಯ ಚಿತ್ರಕಲೆಗಳಿಗೆ ಪ್ರದರ್ಶನಕ್ಕೆ ಚಾಲನೆ ಮಾತನಾಡಿದರು.
ಬಸ್ ನಿಲ್ದಾಣದ ಆವರಣದ ಸುತ್ತ ಇತ್ತೀಚಿಗೆ ನಿರ್ಮಿಸಿದ ಕಂಪೌಂಡ ಗೋಡೆಯ ಮೇಲೆ ಬಣಜವಾಡ ಸಂಸ್ಥೆಯವರು ಹಂಪಿ ದೇವಸ್ಥಾನ, ಚಂದ್ರಯಾನ-3, ಮಹಾತ್ಮಾ ಗಾಂಧಿಜಿ, ರಾಜ್ಯ ಉಚ್ಛ ನ್ಯಾಯಾಲಯ, ವಿಧಾನ ಸೌಧ ಸೇರಿದಂತೆ ಅನೇಕ ಚಿತ್ರಗಳನ್ನು ಬಿಡಿಸಿದ್ದಾರೆ ಇದರಿಂದ ಬಸ್ ನಿಲ್ದಾಣದ ಆವರಣ ಸಾಂಸ್ಕೃತಿಕ ವಾತಾವರಣ ಮೂಡಿದೆ. ಪಟ್ಟಣದ ಸ್ವಚ್ಛತೆಗೆ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಬಣಜವಾಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಬಣಜವಾಡ ಮಾತನಾಡಿ, ಬಸ್ ನಿಲ್ದಾಣ ಆವರಣದ ಕಂಪೌಂಡ ಗೋಡೆಯ ಮೇಲೆ ಸಾಮಾನ್ಯವಾಗಿ ತಂಬಾಕು ಸೇವನೆ ಮಾಡಿ ಉಗುಳಿದ ದೃಷ್ಯಗಳು ಸಾಮಾನ್ಯವಾಗಿರುತ್ತವೆ. ಇದನ್ನು ತಪ್ಪಿಸಲು ಮತ್ತು ಸಾಂಸ್ಕೃತಿಕ ವಾತಾವರಣ ನಿರ್ಮಿಸುವ ಉದ್ದೇಶದಿಂದ ಚಿತ್ರಗಳನ್ನು ಬಿಡಿಸಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಅಥಣಿ , ಶಿನಾಳ, ತಂಗಡಿ, ಮೋಳಿ ಮತ್ತು ಮಂಗಸುಳಿ ಮಾರ್ಗವಾಗಿ ಮಿರಜಕ್ಕೆ ಹೋಗುವ ನೂತನ ಸಾರಿಗೆ ಬಸ್ ಗೆ ಶಾಸಕ ಲಕ್ಷ್ಮಣ ಸವದಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಾರಿಗೆ ಘಟಕದ ವ್ಯವಸ್ಥಾಪಕ ಎನ್.ಎಂ ಕೇರಿ, ಬಣಜವಾಡ ಸಂಸ್ಥೆಯ ಅನಿತಾ ಬಣಜವಾಡ, ಪ್ರಕಾಶ ಚಿಂಚಲಿ, ಪ್ರಕಾಶ ಪಾಟೀಲ, ಸಂಜು ಪಾರ್ಥನಹಳ್ಳಿ, ಮಾಯಾ ನಿಶಾನದಾರ, ಪುರಸಭಾ ಸದಸ್ಯರಾದ ಮಲ್ಲೇಶ ಹುದ್ದಾರ, ರಾಜಶೇಖರ ಗುಡೋಡಗಿ, ಆಶಿಫ್ ತಂಬೋಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು,