ಬಸ್ ನಿಲ್ದಾಣದಲ್ಲಿ ಸ್ಯಾನಿಟೈಸೇಷನ್

ಹೊನ್ನಾಳಿ.ಏ.29;  ಹೊನ್ನಾಳಿಯಲ್ಲಿ ಕೋವಿಡ್ ಎರಡನೇ ಅಲೆಯ ಮುನ್ನೆಚ್ಚರಿಕೆಯಿಂದ ಪುರಸಭೆ ವತಿಯಿಂದ ಖಾಸಗಿ ಬಸ್ ನಿಲ್ದಾಣದಲ್ಲಿ ಸ್ಯಾನಿಟೈಸರ್ ಮಾಡುತ್ತಿರುವುದು ಕಂಡುಬಂತು. ಮಹಾಮಾರಿ ಕೊರೋನಾದಿಂದ  ಸಾರ್ವಜನಿಕ ಸ್ಥಳದಲ್ಲಿ ಸೋಂಕು ಬರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಯಾನಿಟೈಜರ್ ಮಾಡಲಾಗುವುದು ಎಂದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ ಅಶೋಕ್ ತಿಳಿಸಿದ್ದಾರೆ. ಈ ವೇಳೆ ಆರೋಗ್ಯಾಧಿಕಾರಿ ನಾಗೇಶ್  ನಗರಸಭೆ ನೌಕರರ ಅಧ್ಯಕ್ಷ ಅಂಕಣ್ಣ ರವಿ ಇನ್ನು ಮುಂತಾದವರಿದ್ದರು.