ಬಸ್ ನಿಲ್ದಾಣದಲ್ಲಿ ನೀರು ಕುಡಿಯಲು ಹೋದರೆ ದುರ್ವಾಸನೆ

ಚಿತ್ತಾಪುರ:ಅ.29: ತಾಲೂಕಿನ ಬಸ್ ನಿಲ್ದಾಣದಲ್ಲಿ ನೀರು ಕುಡಿಯಲು ಬಂದರೆ ಅಲ್ಲಿ ಮೋರಿ ನೀರು ಮುಂದೆ ಸಾಗದೆ ಅಲ್ಲೇ ನಿಂತಿದ್ದರಿಂದ ಎರಡು ದಿನಗಳಿಂದ ನೀರು ಕುಡಿಯಲು ಹೋದರೆ ದುರ್ವಾಸನೆಯಿಂದ ನೀರು ಕುಡಿಯಲು ಆಗುತ್ತಿಲ್ಲ ಎಂದು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಯುವರಾಜ್ ರಾಠೋಡ್ ಹೆಳಿದರು.

ಕುಡಿಯುವ ನೀರಿನ ಹತ್ತಿರ ನಿಂತಿರುವ ನೀರನ್ನು ಸ್ವಚ್ಛಗೊಳಿಸಿ ಪುನಃ ಮತ್ತೆ ಈ ಪರಿಸ್ಥಿತಿ ಆಗದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ