ಬಸ್ ನಿಲ್ದಾಣದಲ್ಲಿ ನೀರಿನ ಪೈಪ್ ಒಡೆದು ಸಾರ್ವಜನಿಕರಿಗೆ ತೊಂದರೆ

ಗುರುಮಠಕಲ್:ಮಾ.28: ತಾಲೂಕು ಸಾರ್ವಜನಿಕರ ಬಸ್ ನಿಲ್ದಾಣ ವೆಂದರೆ ಅದು ಒಂದು ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳ ಪಟ್ಜಣಗಳ ಜನರು ಬಂದು ಸುಸಜ್ಜಿತವಾದ ಬಸ್ಸುಗಳನ್ನು ಹತ್ತಿ ಸುರಕ್ಷಿತ ವಾಗಿ ತಮ್ಮ ತಮ್ಮ ಗ್ರಾಮಗಳಿಗೆ ಹೋಗಲು ಬಂದು ಸೇರಿ ಕೊಳ್ಳುವ ಸುಂದರ ತಂಗುತಾಣ ಆದರೆ ಗುರುಮಠಕಲ್ ಪಟ್ಟಣದ ಮಧ್ಯೆ ಭಾಗದಲ್ಲಿರುವ ಸಾರ್ವಜನಿಕರ ಬಸ್ ನಿಲ್ದಾಣದಲ್ಲಿ ಜನಸಾಮಾನ್ಯರು ಅಥವಾ ಪ್ರಯಾಣಿಕರು ಬೇರೆ ಬೇರೆ ಗ್ರಾಮಗಳಿಗೆ ಹೋಗಲು ಬರುವ ಪ್ರಯಾಣಿಕರು ಇಲ್ಲಿ ಬಂದು ಮೂಗು ಮುಚ್ಚಿಕೊಂಡು ಕೂಡುವಂತ ವೆವಸ್ಥೆ ಇದ್ದರು ಗ್ರಾಮದ ಮುಖಂಡರು ಕೇಳಿದರು ಕೂಡ ಇಲ್ಲಿ ಕೇಳುವವರು ಯಾರೂ ಇಲ್ಲದಂತಾಗಿವೆ. ಬಸ್ ನಿಲ್ದಾಣದ ಮಧ್ಯೆ ಭಾಗದಲ್ಲಿರುವ ಕಂಟ್ರೋಲ್ ರೂಂ ಹತ್ತಿರ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇದೆ ಆದರೆ ಸಾರ್ವಜನಿಕರು ಕುಡಿಯುವಾಗ ಹೆಚ್ಚಿದ್ದು ನೀರು ಪೈಪಿನ ಮುಖಾಂತರ ಹೊರಗೆ ಹೊಗಬೇಕಾದರೆ ಆ ನೀರಿನ ಪೈಪ್ ಹೊಡೆದು ಸಾರ್ವಜನಿಕರು ಕೂಡುವ ಮಧ್ಯೆ ಭಾಗದಲ್ಲಿ ಪೈಪ್ ಹೊಡೆದು ಜನಸಾಮಾನ್ಯರು ಪ್ರಯಾಣಿಕರು ಅದೃಶ್ಯ ವನ್ನು ನೋಡಿ ಮೂಗು ಮುಚ್ಚಿಕೊಳ್ಳುತ್ತಿದ್ದಾರೆ ಇಂತಹ ಘಟನೆ ನಡೆದು ಏಳೆಂಟು ದಿನಗಳಾದರೂ ಕೂಡ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಂಡು ಬಂದಿಲ್ಲ ಮತ್ತು ಇದು ಅಲ್ಲದೆ ಸ್ವಚ್ಚತೆಯ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿ ಹೇಳಿದರು ಕೂಡ ಪ್ರಯೋಜನ ಇಲ್ಲ ಆದಕಾರಣ ಸಾರ್ವಜನಿಕ ಬಸ್ ನಿಲ್ದಾಣದ ಕಡೆಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಗುರುಮಠಕಲ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಮೇಂಗಜಿ ಹೇಳಿಕೆ ನೀಡಿದರು.