ಬಸ್ ನಿಲುಗಡೆ ಶೆಡ್ ಉದ್ಘಾಟನೆ

ಲಕ್ಷ್ಮೇಶ್ವರ, ಸೆ 4: ತಾಲೂಕಿನ ಶಿಗ್ಲಿ ಗ್ರಾಮದ ಗ್ರಾಮಭಾರತಿ ಶಿಕ್ಷಣ ಸಮಿತಿಯ ಎಸ್‍ಎಸ್ ಕೂಡ್ಲಿಮಠ ಕನ್ನಡ ಮತ್ತು ಆಂಗ್ಲ ಭಾಷೆಯ ಪ್ರೌಢಶಾಲಾ ಆವರಣದಲ್ಲಿ ವಿಧಾನ ಪರಿಷತ್ತಿನ ಸದಸ್ಯ ಎಸ್.ವಿ. ಸಂಕನೂರ ಅವರ ಅನುದಾನದಲ್ಲಿ ಬಸ್ ನಿಲುಗಡೆ ಶೆಡ್ಡಿನ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಂಕನೂರ ಅವರು ಶಿಗ್ಲಿ ಗ್ರಾಮವು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದು ಈ ಗ್ರಾಮದಿಂದ ಉನ್ನತ ಹುದ್ದೆಯನ್ನು ಅಲಂಕರಿಸಿದ ಪ್ರತಿಭಾನ್ವಿತರನ್ನು ನೀಡಿದ ಹೆಮ್ಮೆ ಈ ಗ್ರಾಮಕ್ಕೆ ಇದೆ. ಇಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಶ್ರಮ ವಹಿಸುತ್ತಿದ್ದು ಶಿಕ್ಷಣ ಕಾಶಿಯಾಗಿರುವ ಇಲ್ಲಿ ಜ್ಞಾನವೇ ಶಕ್ತಿ ಶಕ್ತಿಯೆ ಜೀವನ ಎನ್ನುವಂತಿದೆ ಎಂದರು.
ಶಾಸಕ ರಾಮಣ್ಣ ಲಮಾಣಿ ಅವರು ಮಾತನಾಡಿ ಶಿಗ್ಲಿ ಗ್ರಾಮದ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರಲ್ಲದೆ ತಮ್ಮ ಅನುದಾನದಲ್ಲಿ 5 ಲಕ್ಷ ರೂಗಳನ್ನು ನೀಡುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ನಿಂಗಪ್ಪ ಹುನಗುಂದ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಫಕೀರೇಶಪ್ಪ ಹುನಗುಂದ ಗೌರವ ಕಾರ್ಯದರ್ಶಿ, ಸಿ.ಎಂ. ರಾಗಿ ಸದಸ್ಯರಾದ ಡಿ.ವೈ. ಹುನಗುಂದ, ವೀರಣ್ಣ ಪವಾಡದ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕಯ್ಯ ಮುಳುಗುಂದ ಮಠ, ಫಕಿರೇಶ್ ಕಾಳಪ್ಪನವರ, ಹನುಮಂತಪ್ಪ ತಳವಾರ, ಬಸಣ್ಣ ಕಳಸದ ಸೇರಿದಂತೆ ಅನೇಕರಿದ್ದರು.
ಸಿಬಿ ಮೊಗಲಿ ಬಿಬಿ ಬಳಿಗಾರ ಡಿ.ವೈ. ಹುನಗುಂದ ನಿರ್ವಹಿಸಿದರು.