ಬಸ್ ನಿಲುಗಡೆಗೆ ಆಗ್ರಹ

ಮಾನ್ವಿ,ಜ.೧೯- ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗದಲ್ಲಿ ಸಿಂಧನೂರು, ರಾಯಚೂರು ಡಿಪೋಗಳ ವಾಹನವನ್ನು ನಿಲ್ಲಿಸುವಂತೆ ಎಐಡಿಎಸ್‌ಒ ಸಂಘಟನೆಯಿಂದ ವಾಹನ ನಿಯಂತ್ರಣಾಧಿಕಾರಿಗಳಿಗೆ ಮನವಿ ಮಾಡಿದರು.
ನಂತರ ಮಾತಾನಾಡಿ, ಸರ್ಕಾರಿ ಭಾಷಮೀಯಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳು ಹಳ್ಳಿಗಳಿಂದ ಅಧ್ಯಯನ ಮಾಡಲು ಬರುತ್ತಾರೆ. ಪಟ್ಟಣದಲ್ಲಿ ಬಸ್ ಸಮಸ್ಯೆ ಇರುವುದರಿಂದ ವಿದ್ಯಾರ್ಥಿಗಳು ಕಾಲೇಜಿನ ಸರಿಯಾದ ಸಮಯಕ್ಕೆ ಹೋಗಿ ತರಗತಿಗೆ ಹಾಜರಿ ಆಗುವುದಕ್ಕೆ ಆಗುತ್ತಿಲ್ಲ. ಮುಖ್ಯವಾಗಿ ಪರೀಕ್ಷೆಗಳು ಮತ್ತು ಟೆಸ್ಟ್‌ಗಳು ಇರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಕಾಲೇಜಿಗೆ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮಾಡುವುದಕ್ಕೆ ಬಹಳಷ್ಟು ಕಷ್ಟವಾಗುತ್ತಿದೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಹತ್ತಿರ ಸರಿಯಾದ ಸಮಯಕ್ಕೆ ಬಸ್ಸು ನಿಲ್ಲಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಸೈಯದ್ ಜೈದ್ ಸಂಚಾಲಕ, ಯುನುಸ್, ದೇವರಾಜ್, ಮೌನೇಶ್, ಸಾಹಿಲ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.