ಬಸ್ ನಿಲುಗಡೆಗೆ ಆಗ್ರಹಿಸಿ ಪ್ರತಿಭಟನೆ

ಸಿಂಧನೂರು,ನ.೨೧- ಬಸ್ ನಿಲುಗಡೆಗೆ ಒತ್ತಾಯಿಸಿ ತಾಲೂಕಿನ ಬೂದಿಹಾಳ ಕ್ಯಾಂಪ್‌ನಲ್ಲಿ ಸಿಂದನೂರು -ಬಳ್ಳಾರಿ ರಾಜ್ಯ ಹೆದ್ದಾರಿಯಲ್ಲಿ ಎರಡು ಗಂಟೆಗೂ ಅಧಿಕ ಬಸ್,ಲಾರಿ, ಸೇರಿದಂತೆ ಪ್ರತಿಯೊಂದು ವಾಹನಗಳನ್ನು ನಿಲ್ಲಿಸಿ ವಿದ್ಯಾರ್ಥಿಗಳು ,ಗ್ರಾಮಸ್ಥರು ರಸ್ತೆ ತಡೆ ನಡೆಸಿ ಡಿಪೋ ಮ್ಯಾನೇಜರ್ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿ ಬಸ್ ನಿಲ್ಲಿಸುವಂತೆ ಆಗ್ರಹಿಸಿದರು.
ಪ್ರತಿನಿತ್ಯ ವಿವಿಧ ಗ್ರಾಮಗಳಿಂದ ಸಿಂಧನೂರು, ಸಿರಗುಪ್ಪ ನಗರಗಳ ಶಾಲಾ – ಕಾಲೇಜು ಗಳಿಗೆ ವಿದ್ಯಾಭ್ಯಾಸಕ್ಕಾಗಿ ತೆರಳುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸಂಚಾರ ಇಲ್ಲದೆ ದಿನ ನಿತ್ಯ ವಿದ್ಯಾಭ್ಯಾಸಕ್ಕೆ ಅಡಚಣೆ ಆಗುತ್ತಿದ್ದು ,ಈ ವಿಷಯವಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದನೆ ಕೊಡದಿರುವ ಕಾರಣದಿಂದ ಈ ಪ್ರತಿಭಟನೆ ಮಾಡುತ್ತಿದ್ದೆವೆ .ಪ್ರತಿಯೊಂದು ಬಸ್ ಗಳು ದಡೆಸ್ಗೂರುನಲ್ಲಿ ನಿಲ್ಲಿಸುವಂತೆ ಬೂದಿಹಾಳ ಕ್ಯಾಂಪ್‌ನಲ್ಲಿ ನಿಲ್ಲಿಸಬೇಕು ಎಂದು ಗ್ರಾಮಸ್ಥರು ,ವಿದ್ಯಾರ್ಥಿಗಳು ಆಗ್ರಹಿಸಿದರು.ಎರಡು ಕಡೆ ಎರಡು ಕಿ.ಮಿ ವರೆಗೆ ವಾಹನಗಳ ದಟ್ಟಣೆ ಕಂಡುಬಂತು.
ಸ್ಟೇಜ್ ಪಾಯಿಂಟ್ ಮಾಡಿ,ಟಿಕೆಟ್ ನಿಗದಿ ಗೊಳಿಸಿ ಬಸ್‌ಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗುವುದು ವಿದ್ಯಾರ್ಥಿಗಳು ಸಹಕಾರ ಕೊಡಬೇಕೆಂದು ಉಮಾಪತಿ ಟಿ.ಸಿ ಲಿಖಿತವಾಗಿ ಬರೆದುಕೊಟ್ಟ ತರುವಾಯ ಪ್ರತಿಭಟನೆ ಕೈ ಬಿಟ್ಟರು.
ತಾಲೂಕಿನ ಉಮಲೂಟಿ ಗ್ರಾಮದಲ್ಲಿಯೂ ಶಾಲಾ – ಕಾಲೇಜು ,ಆಸ್ಪತ್ರೆ ಸೇರಿದಂತೆ ಬಸ್ ನಿಲ್ಲಿಸಲು ಆಗ್ರಹಿಸಿ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದು ಆ ಭಾಗವಾಗಿ ಇಂದು ಪ್ರತಿಭಟನೆ ನಡೆಸಿ ಬಸ್ ನಿಲ್ಲಿಸುವಂತೆ ಆಗ್ರಹಿಸಿದರು.ಪ್ರತಿಭಟನೆ ಸ್ಥಳದಲ್ಲಿ ಯಾವುದೇ ಅವಘಡಗಳು ಸಂಬವಿಸದಂತೆ ಪೋಲಿಸರು ಸ್ಥಳಕ್ಕೆ ಆಗಮಿಸಿ ಮುನ್ನೆಚ್ಚರಿಕೆ ವಹಿಸಿದ್ದರು.ಜನಪ್ರತಿನಿಧಿಗಳಾದ ಸಿಂದನೂರು ಶಾಸಕ ಹಂಪನಗೌಡ ಬಾದರ್ಲಿ ,ಮಸ್ಕಿ ಶಾಸಕ ಬಸನಗೌಡ ತುರವಿಹಾಳ ಕೂಡಲೇ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸುವಲ್ಲಿ ಮುಂದಾಗಬೇಕು ಎಂದು ಆಗ್ರಹಿಸಿದರು ಸ್ಥಳದಲ್ಲಿ ಆಗ್ರಹಿಸಿದರು.