ಬಸ್ ನಲ್ಲಿ ಪರ್ಸ್ ಬಿಟ್ಟು ಹೋಗಿದ್ದ ಯುವತಿಗೆ ಮರಳಿಸಿದ ಚಾಲಕ ಕಂ ನಿರ್ವಾಹಕನ ಕಾರ್ಯ ಶ್ಲಾಘನೆ

ಯಾದಗಿರಿ: ಡಿ.9:ಬಸ್ ನಲ್ಲಿ ಬಂಗಾರ ಹಣವಿದ್ದ ಪರ್ಸ್ ಬಿಟ್ಟು ಇಳಿದಿದ್ದ ಯುವತಿಗೆ ಆ ಪರ್ಸ್‍ಅನ್ನು ಆಕೆಗೆ ಮರಳಿಸಿದ ಬಸ್ ಚಾಲಕ ಮಾನವೀಯತೆ ಮೆರೆದಿದ್ದು, ಇದಕ್ಕೆ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಬುಧವಾರ ಶಹಾಪೂರದಿಂದ ಯಾದಗಿರಿಗೆ ನಾನ್ ಸ್ಟಾಪ್ ಬಸ್ ನಲ್ಲಿ ಬಂದಿಳಿದ ಇಲ್ಲಿನ ಬಸವೇಶ್ವರ ನಗರದ ನಿವಾಸಿಯಾಗಿರುವ ಭಾಗ್ಯಶ್ರೀ ಎಂಬ ಯುವತಿಗೆ ಮನೆಗೆ ತೆರಳಿದ ನಂತರ ತನ್ನ ಪರ್ಸ್ ಕಳೆದುಹೋದ ಬಗ್ಗೆ ಮನವರಿಕೆಯಾಗಿದೆ.

ತಕ್ಷಣ ಬಸ್ ಸ್ಟ್ಯಾಂಡಿಗೆ ಅಳುತ್ತಾ ಬಂದು ಅಲ್ಲಿ ಇಲ್ಲಿ ವಿಚಾರಿಸತೊಡಗಿದ್ದಾಳೆ ಆಗ ಬಸ್ ಚಾಲಕ ಕಂ. ಕಂಡೆಕ್ಟರ್ ಹಣಮಂತ್ರಾಯ ಯುವತಿಗೆ ವಿಚಾರಿಸಿದಾಗ ಪರ್ಸ್ ಕಳೆದಿದೆ ಎಂದು ಹೇಳಿದ್ದಾಳೆ.

ಆಗ ಅಲ್ಲಿಯೇ ಇದ್ದ ಸಂಚಾರಿ ನಿಯಂತ್ರಕರ ಸಮ್ಮುಖದಲ್ಲಿ ಕಳೆದು ಹೋದ ಪರ್ಸ್ ಹಾಗೂ ಅದರಲ್ಲಿನ ವಿವರಗಳನ್ನು ತಿಳಿಸುವಂತೆ ಕೇಳಿದಾಗ ಅದರಲ್ಲಿ ಒಂದುವರೆ ತೊಲೆಯ ಬಂಗಾರದ ಚೈನು, ಆಧಾರ ತನ್ನ ಕಾರ್ಡ, ಪಾನ್ ಕಾರ್ಡ್ ಐದು ಸಾವಿರ ರೂ ನಗದು ಇರುವ ಬಗ್ಗೆ ಆಕೆ ನೀಡಿದ ವಿವರಗಳು ಸರಿಯಾಗಿದ್ದ ಹಿನ್ನೆಲೆಯಲ್ಲಿ ಸಡಂಚಾರ ನಿಯಂತ್ರಕರು ಹಾಗೂ ಇನ್ನಿತರ ಸಿಬ್ಬಂದಿಗಳ ಸಮ್ಮುಖದಲ್ಲಿ ಪರ್ಸ್‍ಅನ್ನು ಹಸ್ತಾಂತರಿಸಿ ಧೈರ್ಯ ತುಂಬಿದರು. ನಂತರ ಯುವತಿ ಧನ್ಯವಾದ ತಿಳಿಸಿ ನೆಮ್ಮದಿಯಿಂದ ಮನೆಗೆ ತೆರಳಿದಳು.
ಈ ಸಂದರ್ಭದಲ್ಲಿ ಕರ್ತವ್ಯ ನಿರತ ಸಂಚಾರ ನಿಯಂತ್ರಕರಾದ ಮೈನುದ್ದಿನ್, ವೆಂಕಟೇಶ, ಚಂದ್ರಕಾಂತ, ಚಾಲಕ ಕಂ ನಿರ್ವಾಹಕ ಶಿವಕುಮಾರ ದಂತಾಪೂರ ಇನ್ನಿತರ ಸಿಬ್ಬಂದಿ ವರ್ಗದವರು ಇದ್ದರು