ಬಸ್ ತಡೆದು ವಿದ್ಯಾರ್ಥಿಗಳು, ಪಾಲಕರಿಂದ ಪ್ರತಿಭಟನೆ

ಮಾನ್ವಿ,ಜೂ.೨೩-
ತಾಲೂಕಿನ ಬೈಲ್ ಮರ್ಚೇಡ್ ಗ್ರಾಮದಲ್ಲಿ ಬಸ್ ತಡೆದು ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಪ್ರತಿಭಟನೆಯನ್ನು ಮಾಡಲಾಯಿತು ಕಂಬಳನೆತ್ತಿ, ಜುಕೂರ, ರಾಜಲಬಂಡ, ಗೋರ್ಕಲ್, ಬೈಲ್ ಮರ್ಚೇಡ್ ವಿದ್ಯಾರ್ಥಿಗಳಿಂದ ಸೂಮಾರು ೨೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಇಷ್ಟು ವಿದ್ಯಾರ್ಥಿಗಳಿಗೆ ಕೇವಲ ಒಂದೇ ಬಸ್ಸಿನ ವ್ಯವಸ್ಥೆ ಇದೆ ಇಷ್ಟ ವಿದ್ಯಾರ್ಥಿಗಳು ಇರುವ ಈ ಭಾಗಕ್ಕೆ ಬೇಳಿಗ್ಗೆ ಮತ್ತು ಮದ್ಯಾಹ್ನ ಇನ್ನು ಒಂದು ಬಸ್ಸಿನ ವ್ಯವಸ್ಥೆ ಮಾಡಿಕೊಡಿ ಎಂದು ಬೈಲ್ ಮರ್ಚೇಡ್ ಗ್ರಾಮದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಪ್ರತಿಭಟನೆಯನ್ನು ಮಾಡಲಾಯಿತು.
ಮನ್ವಿ ಬಸ್ ವ್ಯವಸ್ಥಾಪಕರಿಗೆ ಊರಿನ ಮುಖಂಡರಾದ ಬಂದೇನಾವಜ್ ಮತ್ತು ಯಲ್ಲಪ್ಪ ನಾಯಕ್ ಮತನಾಡಿ ೨೦೦ ವಿದ್ಯಾರ್ಥಿಗಳಿಗೆ ಒಂದೇ ಬಸ್ಸಿನಲ್ಲಿ ಪ್ರಯಾಣಿಸಲು ಅಗುವುದಲ್ಲಿ ೨ ಬಸ್ಸಿನ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಹೇಳಿದರು. ಅದಕ್ಕೆ ಸ್ಪಂದಿಸಿದ ವ್ಯವಸ್ಥಪಕರು ನಾಳೆ ನಿಂದ ೨ ಬಸ್ಸಿನ ವ್ಯವಸ್ಥೆಯನ್ನು ಮಾಡುವುದಾಗಿ ಭರವಸೆಯನ್ನು ಕೊಟ್ಟರು.
ಈ ಸಂಧರ್ಭದಲ್ಲಿ ಗ್ರಾಮದ ಮುಖಂಡರಾದ, ವೀರಯ್ಯ ಸ್ವಾಮಿ, ಹುಲಿಗೆಯ್ಯ ನಾಯಕ್, ಅಳದಯ್ಯ ನಾಯಕ, ಇದ್ದರು ನಂತರ ಎಲ್ಲಾ ವಿದ್ಯಾರ್ಥಿಗಳು ಮಾನ್ವಿ ಬಸ್ ಡಿಪೋ ತೆರಳಿ ವ್ಯವಸ್ಥಾಪಕರಿಗೆ ವಿದ್ಯಾರ್ಥಿ ಮಖಂಡ ಸುರೇಶ್ ಬೈಲ್ ಮರ್ಚೇಡ್ ಹಾಗೂ ನೂರಾರು ವಿದ್ಯಾರ್ಥಿಗಳು ಮನವಿ ಪತ್ರ ವನ್ನು ಕೊಟ್ಟರು ಒಂದು ವೇಳೆ ನಾಳೆಯಿಂದ ಬಸ್ ವ್ಯವಸ್ಥೆಯನ್ನು ಮಾಡದೆ ಹೋದರೆ ಮತ್ತೇ ಪ್ರತಿಭಟನೆಯನ್ನು ಮಾಡುವುದಾಗಿ ಹೇಳಿದರು.
ಈ ಸಂದರ್ಭಗಳಲ್ಲಿ ನೂರಾರು ವಿದ್ಯಾರ್ಥಿಗಳು ಇದ್ದರು.