ಬಸ್ ಡಿಪೋಕ್ಕೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ

ಹರಿಹರ.ಏ.೧೯;   ಸಾರಿಗೆ ನೌಕರರು ಡಿಪೊಕ್ಕೆ ಮುತ್ತಿಗೆ ಹಾಕುತ್ತಾರೆ ಎಂಬ ಹಿನ್ನೆಲೆಯಲ್ಲಿ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಪಿಎಸ್ ಐ ನೇತೃತ್ವದಲ್ಲಿ ಕೆಎಸ್ ಆರ್ ಟಿಸಿ ಡಿಪೋ ಕ್ಕೆ ಪೋಲಿಸ್ ಬಿಗಿ ಭದ್ರತೆಯನ್ನು ಮಾಡಲಾಯಿತು 13ನೇ  ದಿನಕ್ಕೆ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಕೆಎಸ್ಸಾರ್ಟಿಸಿ ಡಿಪೋಕ್ಕೆ ಸಾರಿಗೆ ನೌಕರರು ಮುತ್ತಿಗೆ ಹಾಕುತ್ತಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಇಂದು ಬೆಳಗಿನ ಜಾವದಿಂದ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಗರ ಠಾಣೆ ಪಿಎಸ್ ಐ ಸುನಿಲ್ ಬಸವರಾಜ ತೇಲಿ ಹೇಳಿದರು ಹರಿಹರ ಬಸ್ ಡಿಪೋ ಆವರಣದಲ್ಲಿ ಮಾತನಾಡಿದ ಅವರು ಈಗಾಗಲೇ ಕೆಲವು ಸಾರಿಗೆ ಬಸ್ಸುಗಳನ್ನು ಚಾಲಕರು ನಿರ್ವಾಹಕರು ಪ್ರಯಾಣಿಕರನ್ನು ಊರುಗಳಿಗೆ  ಕರೆದೊಯ್ಯುವ ಕಾರ್ಯವನ್ನು ಮಾಡುತ್ತಿದ್ದಾರೆ .ಸರ್ಕಾರದ ಆದೇಶದಂತೆ ಈಗಾಗಲೇ 12ಜನ ಸಾರಿಗೆ ನೌಕರರ ಮೇಲೆ ಎಸ್ಮಾ ಕಾಯ್ದೆ ದಡಿ ಕೇಸು ದಾಖಲು ಮಾಡಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದರು ಸಾರಿಗೆ ನೌಕರರು ತಮ್ಮ ಹಕ್ಕನ್ನು ಕಾನೂನು ಪ್ರಕಾರವಾಗಿ ಕೇಳಿ ಪಡೆಯಬೇಕು ಅದನ್ನ ಬಿಟ್ಟು ಮುಷ್ಕರದ ನೆಪದಲ್ಲಿ ಬಸ್ಸುಗಳಿಗೆ ಕಲ್ಲು ತೂರುವುದು ಬಸ್ಸುಗಳಿಗೆ ಹಾನಿ ಮಾಡುವುದು ಈ ರೀತಿ ಕಂಡುಬಂದಲ್ಲಿ ಮುಲಾಜಿಲ್ಲದೆ ಕಾನೂನು ಪ್ರಕಾರ ಕೇಸನ್ನು ದಾಖಲು ಮಾಡಲಾಗುತ್ತದೆ ಇಲ್ಲಿವರೆಗೂ ಹರಿಹರದ ಸಾರಿಗೆ ಬಸ್ ಡಿಪೋದಲ್ಲಿ 1ಬಾರಿ ಮಾತ್ರ ಮುಷ್ಕರ ಮಾಡಿದರೂ ಅದರಲ್ಲಿ ಹನ್ನೆರಡು ಜನರಿಗೆ ಕೇಸನ್ನು ದಾಖಲು ಮಾಡಲಾಗಿತ್ತು ಇಲ್ಲಿವರೆಗೂ ಯಾರೂ ಸಾರಿಗೆ ನೌಕರರು ಬಸ್ ಸಂಚಾರಕ್ಕೆ ಅಡ್ಡಿಪಡಿಸಿರುವುದು ಕಂಡು ಬಂದಿರುವುದಿಲ್ಲ ಜಿಲ್ಲಾ ಡಿಟಿಒ  ಮತ್ತು ಡಿಪೋ ಮ್ಯಾನೇಜರ್  ಇವರುನಿನ್ನೆಯ ದಿನ ಮುಸ್ಕರ ಮಾಡುತ್ತಾರೆ ಎಂಬ ಮಾಹಿತಿ ಮೇರೆಗೆ ಇಂದು ಬೆಳಗಿನ ಜಾವದಿಂದ ಬಸ್ ಡಿಪೋದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಬಸ್ ಸಂಚಾರಕ್ಕೆ ಅನುವು ಮಾಡಲಾಗಿದೆ ಎಂದರು ದಾವಣಗೆರೆ ಜಿಲ್ಲಾ ಕೆಎಸ್ ಆರ್ ಟಿಸಿ ವಿಭಾಗೀಯ ಅಧಿಕಾರಿ ಮಂಜುನಾಥ್ ಜಿ ಬಿ ಮಾತನಾಡಿ ಸಾರಿಗೆ ನೌಕರರ ಮುಷ್ಕರವು 13 ನೇ ದಿನಕ್ಕೆ ಕಾಲಿಟ್ಟ ದಿನದಿಂದ  ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ತೆರಳಿ  ಬಸ್ ಚಾಲಕ ನಿರ್ವಾಹಕರನ್ನು ಮನವೊಲಿಸುವ ಪ್ರಯತ್ನವನ್ನು ಮಾಡಿ ಈ ಬಸ್ಸುಗಳು ಸಂಚರಿಸಿ ಪ್ರಯಾಣಿಕರನ್ನು ಕರೆದೊಯ್ಯುವುದಕ್ಕೆ ಅನುಕೂಲ ಮಾಡಿ ಕೊಟ್ಟಿರುತ್ತೇವೆ ಆದರೆ ಸ್ವಯಂಪ್ರೇರಿತರಾಗಿ ಬರುತ್ತಿದ್ದ ಚಾಲಕ ನಿರ್ವಾಹಕರಿಗೆ ಕೆಲವರು ಬಸ್ ಡಿಪೋಕ್ಕೆ ಮುತ್ತಿಗೆ ಹಾಕಿ ಮುಷ್ಕರ ಮಾಡುತ್ತೇವೆ ಎಂದು ಮಾಹಿತಿ ತಿಳಿದ ತಕ್ಷಣ ಇಂದು ಕೆಲವು ಚಾಲಕರು ನಿರ್ವಾಹಕರು ಕರ್ತವ್ಯ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಆದರೂ ಸಹ ಸ್ವಯಂ ಪ್ರೇರಿತರಾಗಿ ಕೆಲವು ಬಸ್ಸುಗಳನ್ನು ಚಾಲಕ ನಿರ್ವಾಹಕರು ಬೇರೆ ಬೇರೆ ಬೇರೆ ಮಾರ್ಗಗಳಲ್ಲಿ ಸಂಚರಿಸುವುದಕ್ಕೆ ಕರ್ತವ್ಯ ನಿರತರಾಗಿದ್ದಾರೆ ಎಂದರು.ಏನೇ ಇರಲಿ ಸಾರಿಗೆ ನೌಕರರು ತಮ್ಮ ಹಕ್ಕನ್ನು ಕೇಳುವುದು ಕಾನೂನಿನ ಅಡಿಯಲ್ಲಿ ಹೋಗಬೇಕೇ ವಿನಃ  ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಬೇಕು .ಸಾರ್ವಜನಿಕರಿಗೆ ಅನಕೂಲ ಆಗೋದಕ್ಕೆ ಕೆಎಸ್ಸಾರ್ಟಿಸಿ ಬಸ್ಸುಗಳು ಇವೆ ಇಂಥ ಸಂದರ್ಭದಲ್ಲಿ ಮುಷ್ಕರ ಮಾಡಿದರೆ ಜನರಿಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗುತ್ತವೆ ಸಾರ್ವಜನಿಕರಿಗೆ ಅನುಕೂಲ ಮಾಡುವ ಹಿತದೃಷ್ಟಿಯಿಂದ ನಮ್ಮ ಸಂಸ್ಥೆ ಇರುವುದು ಆದ್ದರಿಂದ ಸ್ವಯಂ ಪ್ರೇರಿತರಾಗಿ ಚಾಲಕ ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿ ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು ಈ ಸಂದರ್ಭದಲ್ಲಿ ಕೆಎಸ್ ಆರ್ ಟಿಸಿ ಡಿಪೋ ಮ್ಯಾನೇಜರ್ ಎಸ್ ಸಂದೀಪ್ .ಅಂಕಿ ಸಂಖ್ಯೆ ಅಧಿಕಾರಿ ಚಂದ್ರಶೇಖರ್ .ಪೊಲೀಸ್ ಅಧಿಕಾರಿಗಳಾದ ಡಿ ಟಿ ಶ್ರೀನಿವಾಸ್ .ವಿಠಲ .ಮಹಿಳಾ  ಪೋಲಿಸ್ ಪೇದೆ ರೇಣುಕಮ್ಮ .ಎಎಸ್ ಐ ರಾಜಶೇಖರ್ .ಮಹೇಶ್ .ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗ ಕೆಎಸ್ಸಾರ್ಟಿಸಿ ಅಧಿಕಾರಿ ವರ್ಗದವರು ಇದ್ದರು