ಬಸ್ ಡಿಕ್ಕಿ :ಯುವಕ ಸಾವು


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಜು.06 :-ತಾಲೂಕಿನ ಕಣವಿಹಳ್ಳಿ ಗ್ರಾಮದಲ್ಲಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲಿ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡಿದಿದೆ,
ಕಣಿವಿಹಳ್ಳಿ ಗ್ರಾಮದ ನಿವಾಸಿ ಗಣೇಶ್(27) ಮೃತಪಟ್ಟ ಯುವಕ ಎಂದು ಗುರಿತಿಸಲಾಗಿದೆ,
ಹಾಲಿನ ಡೈರಿಗೆ ಹಾಲು ಹಾಕಿ ಮನೆಗೆ ತೆರಳುವ ದಾರಿಯಲ್ಲಿ ಮೂತ್ರ ವಿಸರ್ಜನೆ ಮಾಡುವ ವೇಳೆಯಲ್ಲಿ ಲಾರಿಯನ್ನು ಹಿಂದೆಕ್ಕುಲು ಹೋಗಿ ಬಸ್ ಚಾಲಕ ಡಿಕ್ಕಿ ಹೊಡೀದಿದ್ದಾನೆ ಯುವಕನ ತಲೆ ಛಿದ್ರವಾಗಿ ಸ್ಥಳದಲ್ಕಿ ಮೃತ ಪಟ್ಟಿದಾನೆ.
ಬಳ್ಳಾರಿಯಿಂದ ಧರ್ಮಸ್ಥಳಕ್ಕೆ ಪ್ರಯಾಣಸುತಿದ್ದ ರಾಜ್ಯ ರಸ್ತೆ ಸರಿಗೆ ಬಸ್ ಚಾಲಕನ  ನಿರ್ಲಕ್ಷವೇ ಕಾರಣ ಎನ್ನಲಾಗಿದೆ, ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ