ಬಸ್ ಡಿಕ್ಕಿ: ಬೈಕ್ ಸವಾರ ಸಾವು

ಕಲಬುರಗಿ,ಜ.25-ಕೆಎಸ್‍ಆರ್‍ಟಿಸಿ ಬಸ್ ಮೈಮೇಲೆ ಹರಿದು ಹೋಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಹುಮನಾಬಾದ ರಸ್ತೆಯಲ್ಲಿ ನಡೆದಿದೆ.
ಮೃತನನ್ನು ಸೋಮಶೇಖರ್ (34) ಎಂದು ಗುರುತಿಸಲಾಗಿದೆ.
ಸೋಮಶೇಖರ್ ಅವರು ಬೈಕ್ ಮೇಲೆ ಹುಮನಾಬಾದ ರಸ್ತೆಯಲ್ಲಿರುವ ದಾಲ್‍ಮಿಲ್‍ಗೆ ಹೋಗಿ ಮರಳಿ ಮನೆಯ ಕಡೆಗೆ ಹೋಗುತ್ತಿದ್ದಾಗ ಟಂಟಂಗೆ ಬೈಕ್ ಟಚ್ಚಾಗಿ ಕೆಳಗೆ ಬಿದ್ದಿದ್ದು ಈ ವೇಳೆ ಬೀದರ್ ಕಡೆಯಿಂದ ಕಲಬುರಗಿ ಕಡೆಗೆ ಬರುತ್ತಿದ್ದ ಬಸ್ ಮೈಮೇಲೆ ಹರಿದು ಹೋಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.