ಬಸ್ ಡಿಕ್ಕಿ ಬಸ್ಸಿನ ಚಕ್ರಕ್ಕೆ ಸಿಲುಕಿ ಹಸು ದುರ್ಮರಣ ಗಾಯಗೊಂಡ ದೇವಾಪುರ ಗ್ರಾಮದ ನಾಲ್ವರ ಸ್ಥಿತಿ ಗಂಭೀರ

ಸುರಪುರ:ಜ 12: ಬೈಕ್ ಮತ್ತು ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ನಾಲ್ವರು ವ್ಯಕ್ತಿಗಳಿಗೆ ಗಂಭೀರ ಗಾಯಗಳಾಗಿರುವ ಘಟನೆ
ಸುರಪುರ ನಗರದ ಕುಂಬಾರಪೇಠ ಇಳಿಜಾರು ಪ್ರದೇಶದ ಹನುಮಾನ ದೇವಸ್ಥಾನದ ಸಮೀಪದಲ್ಲಿ ಘಟನೆ ನಡೆದಿದೆ
ಹಸುವೊಂದು ರಸ್ತೆಯಲ್ಲಿ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಹಸು ಸ್ಥಳದಲ್ಲಿ ಬಸ್ಸಿನ ಚಕ್ರಕ್ಕೆ ಸಿಲುಕಿ ಮೃತಪಟ್ಟಿದೆ.

ಇನ್ನೂ ಗಾಯಾಳು ವ್ಯಕ್ತಿಗಳು ಸುರಪುರ ತಾಲ್ಲೂಕಿನ ದೇವಾಪೂರ ಗ್ರಾಮದವರು ಎಂದು ಗುರುತಿಸಲಾಗಿದ್ದು ಬಾಲಕನೊಬ್ಬನ ಕೈ ಸಂಪೂರ್ಣ ನುಜ್ಜುಗುಜ್ಜಾಗಿದೆ.

ದೇವಾಪೂರ ಗ್ರಾಮದಿಂದ ಸುರಪುರ ನಗರಕ್ಕೆ ಬೈಕ್ ಮೇಲೆ ತೆರಳುತ್ತಿರುವಾಗ ಘಟನೆ ನಡೆದಿದ್ದು ನಾಲ್ವರ ಸ್ಥಿತಿ ಗಂಭೀರವಾಗಿದೆ.

ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಗಳನ್ನು ಸುರಪುರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿ ಜಿಲ್ಲೆಗೆ ಕಳುಹಿಸಿ ಕೊಡಲಾಗಿದೆ.

ಅದೆ ರಸ್ತೆಯ ಮೇಲೆ ತೆರಳುತ್ತಿದ್ದ ಸುರಪುರ ಶಾಸಕರು ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅದ್ಯಕ್ಷರಾದ ನರಸಿಂಹನಾಯಕ (ರಾಜೂಗೌಡ) ಘಟನಾ ಸ್ಥಳಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ಪರಿಶೀಲಿಸಿ ಮಾಹಿತಿ ಪಡೆದು ಗಾಯಾಳುಗಳನ್ನು ವಿಚಾರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟು ಮಾನವೀಯತೆ ಮೆರೆದರು.

ಈ ಘಟನೆಗೆ ಸಂಬಂಧಿಸಿದಂತೆ ಸುರಪುರ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.