ಬಸ್-ಟಂಟಂ ಮಧ್ಯೆ ಡಿಕ್ಕಿ: ಓರ್ವ ಸಾವು, ಹಲವರಿಗೆ ಗಾಯ

ಚಿತ್ತಾಪುರ,ಡಿ.18-ಚಿತ್ತಾಪುರ ಪಟ್ಟಣದ ಹೊರವಲಯದಲ್ಲಿ ಕೆ.ಎಸ್.ಆರ್.ಟಿ.ಸಿ.ಬಸ್ ಮತ್ತು ಟಂಟಂ ನಡುವೆ ಡಿಕ್ಕಿ ಸಂಭವಿಸಿ ಟಂಟಂನಲ್ಲಿದ್ದ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟು ಹಲವರಿಗೆ ಗಾಯಗಳಾದ ಘಟನೆ ಇಂದು ನಡೆದಿದೆ.
ಡೋಣಗಾಂವ ಗ್ರಾಮದಿಂದ ಚಿತ್ತಾಪುರ ಮಾರ್ಗವಾಗಿ ನರಬೋಳ ಕಡೆಗೆ ಹೋಗುತ್ತಿದ್ದ ಟಂಟಂ ಹಾಗೂ ಜೇವರ್ಗಿಯಿಂದ ಚಿತ್ತಾಪುರಗೆ ಬರುತ್ತಿದ್ದ ಬಸ್ ನಡುವೆ ಡಿಕ್ಕಿ ಸಂಭವಿಸಿ ಟಂಟಂ ಪಲ್ಟಿಯಾಗಿ ಅದರಲ್ಲಿದ್ದ ಡೋಣಗಾಂವ ಗ್ರಾಮದ ಶರಣಪ್ಪ ಮಾಲಿಪಾಟೀಲ (98) ಎಂಬುವವರು ಬಸ್ಸಿನ ಟೈಯರ್ ಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಗಾಯಗೊಂಡವರನ್ನು ಅಂಬ್ಯುಲೆನ್ಸ್ ಮೂಲಕ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಚಿತ್ತಾಪುರ ಪಿಎಸ್ಐ ಶ್ರೀಶೈಲ್ ಅಂಬಾಟಿ, ಹಾಗೂ ವಾಡಿ ಪಿಎಸ್ಐ ವಿಜಯ್ ಕುಮಾರ್ ಬಾವಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.