ಬಸ್ ಘಟಕದಲ್ಲಿ 116 ನೇ ಡಾ. ಬಾಬು ಜಗಜೀವನ ರಾಮ್ ಜಯಂತಿ ಆಚರಣೆ

ಸೇಡಂ,ಎ, 05: ಪಟ್ಟಣದ ಬಸ್ ಘಟಕದಲ್ಲಿಂದು ಸ್ವಾತಂತ್ರ್ಯ ಹೋರಾಟಗಾರರು ಮಾಜಿ ಉಪಪ್ರಧಾನಿ ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಮ್ ರವರ 116 ನೇ ಜಯಂತ್ಯೋತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಬಸ್ ಘಟಕದ ವ್ಯವಸ್ಥಾಪಕರಾದ ಯೋಗಿನಾಥ್ ಅವರು ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಈ ವೇಳೆಯಲ್ಲಿ ವಿಜಯ್ ಕುಮಾರ್, ಕಿರಣಕುಮಾರ್, ರಾಷ್ಟ್ರಪಾಲ್, ಮುರುಗೇಂದ್ರ, ಧರ್ಮಣ್ಣ ದಸರಥ ಸೇರಿದಂತೆ ಘಟಕದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.