ಬಸ್ ಗಳಲ್ಲಿ ಪಿಕ್ ಪಾಕೆಟ್ಒಂದೇ ಕುಟುಂಬದ ಐವರು ಸೆರೆ

ಬೆಂಗಳೂರು,ಜು.೨೫-ಬಸ್ ನಿಲ್ದಾಣಗಳು ಹಾಗೂ ಬಿಎಂಟಿಸಿ ಬಸ್ ಗಳನ್ನು ಗುರಿಯಾಗಿಸಿಕೊಂಡು ಪಿಕ್ ಪಾಕೆಟ್ ಮಾಡುತ್ತಿದ್ದ ಒಂದೇ ಕುಟುಂಬದ ಐವರು ಆರೋಪಿಗಳನ್ನು ಸಂಪಂಗಿರಾಮನಗರ ಪೊಲೀಸರು ಬಂಧಿಸಿದ್ದಾರೆ.
ಕದ್ರಿವೇಲು, ಕನ್ಯಾಕುಮಾರ್, ಮಹೇಶ್, ಸುಂದರ್ ರಾಜ್ ಹಾಗೂ ಸೈಯ್ಯದ್ ಸಲೀಂ ಬಂಧಿತ ಆರೋಪಿಗಳಾಗಿದ್ದಾರೆ.
ಬಸವನಗುಡಿಯ ಮನೆಯೊಂದರಲ್ಲಿ ವಾಸವಿದ್ದ ಆರೋಪಿಗಳು ಬಸ್ ನಿಲ್ದಾಣಗಳು, ಬಸ್ ಗಳನ್ನು ಗುರಿಯಾಗಿಸಿಕೊಳ್ಳುತ್ತಿ ದ್ದರು.
ಪ್ರಯಾಣಿಕರ ಸೋಗಿನಲ್ಲಿ ಬಂದು ಇತರೆ ಪ್ರಯಾಣಿಕರ ಗಮನವನ್ನು ಬೇರೆಡೆ ಸೆಳೆದು,ವ್ಯಾಲೆಟ್,ಚಿನ್ನಾಭರಣಗಳು ನಗದು ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು.
ಬಹುತೇಕ ಸಂದರ್ಭಗಳಲ್ಲಿ ಕಳೆದುಕೊಂಡವರು ದೂರು ನೀಡದಿ ರುವುದೇ ಆರೋಪಿಗಳಿಗೆ ವರದಾನವಾಗಿತ್ತು. ಹಲಸೂರು ಗೇಟ್, ಮೆಜೆಸ್ಟಿಕ್, ಉಪ್ಪಾರಪೇ ಟೆ ಸದಾಶಿವನಗರ ವ್ಯಾಪ್ತಿಯ ಬಸ್ ನಿಲ್ದಾಣಗಳು ಬಸ್ ಗಳಲ್ಲಿ ಜೇಬುಗಳ್ಳತನ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ