
ಮುಂಬೈ.ಏ೧೫:ಬಸ್ ಕಣಿವೆಗೆ ಉರುಳಿ ೧೨ ಮಂದಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಅಪಘಾತದಲ್ಲಿ ೨೫ ಮಂದಿ ಗಾಯಗೊಂಡಿದ್ದಾರೆ.
ಲೋನಾವಾಲಾ ಬಳಿಯ ಖಂಡಾಲ ಘಾಟ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಣಿವೆಗೆ ಉರುಳಿ ಬಿದ್ದಿದೆ. ಅಪಘಾತಕ್ಕೀಡಾದ ಬಸ್ ಮುಂಬೈನಿಂದ ಪುಣೆಗೆ ತೆರಳುತ್ತಿತ್ತು ಈ ವೇಳೇ ಬಸ್ ನಿಯಂತ್ರಣ ತಪ್ಪಿ ಕೋಪಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ಪೊಲಿಸರು ತಿಳಿಸಿದ್ದಾರೆ.ಎಂದು ‘ಇಂಡಿಯಾ ಟುಡೆ’ವರದಿ ಮಾಡಿದೆ.ಲಭ್ಯವಿರುವ ಮಾಹಿತಿ ಪ್ರಕಾರ, ಬೆಳಗಿನ ಜಾವ ೪:೩೦ರ ಸುಮಾರಿಗೆ ಖಂಡಾಲ ಘಾಟ್‌ನ ಶಿಂಡ್ರೋಬಾ ದೇವಾಲಯದ ಬಳಿ ಡ್ರೈವರ್ ನಿಯಂತ್ರಣ ಕಳೆದುಕೊಂಡ ಬಸ್ ತಡೆಗೋಡೆ ಗುದ್ದಿ ೫೦೦ ಅಡಿ ಆಳದ ಕಣಿವೆಗೆ ಉರುಳಿದೆ. ಪೊಲೀಸ್ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆ ಕೈಗೊಂಡು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.