ಬಸ್, ಆಟೋ ಚಾಲಕರಿಗೆ ಮಾಸ್ಕ್ ವಿತರಣೆ

ಕಲಬುರಗಿ,ಮಾ.26-ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಷಯರೋಗ ದಿನದ ಅಂಗವಾಗಿ ಕ್ಷಯರೋಗ ಕುರಿತು ಜಾಗೃತಿಯ ಜೊತೆಗೆ ಬಸ್ ಮತ್ತು ಆಟೋ ಚಾಲಕರಿಗೆ ಮಾಸ್ಕ್ ಗಳನ್ನು ವಿತರಿಸಲಾಯಿತು.
ನಗರದ ಸಿಟಿ ಬಸ್ ನಿಲ್ದಾಣ ಹಾಗೂ ಆಟೋ ನಿಲ್ದಾಣಗಳಲ್ಲಿ ಬಸ್ ಮತ್ತು ಆಟೋ ಚಾಲಕರಿಗೆ ಮಾಸ್ಕ್ ವಿತರಿಸಿ ಕ್ಷಯ ರೋಗ ಮತ್ತು ಕೋವಿಡ್ ಕುರಿತು ಜಾಗೃತಿ ಮೂಡಿಸಲಾಯಿತು.
ವಿಶ್ವ ಕ್ಷಯರೋಗ ದಿನದ ಅಂಗವಾಗಿ ಸೇಡಂ, ಚಿತ್ತಾಪುರ ಕಮಲಾಪುರ, ಜೇವರ್ಗಿ, ಯಡ್ರಾಮಿ, ಕಾಳಗಿ ,ಅಫಜಲಪುರ, ಆಳಂದ ಸೇರಿದಂತೆ ಪ್ರತಿಯೊಂದು ತಾಲ್ಲೂಕಿನಲ್ಲಿ ಅರಿವು ಮೂಡಿಸಲಾಗುತ್ತಿದೆ. ಜಿಲ್ಲಾ ಡಿಆರ್ ಟಿಬಿ ಅಪ್ತ ಸಮಾಲೋಚಕ ಮಂಜುನಾಥ ಕಂಬಾಳಿಮಠ, ಎಸ್ ಟಿ ಎಸ್ ಶರಣಬಸಪ್ಪ ಸಜ್ಜನಶೆಟ್ಟಿ, ಟಿಬಿ ಹೆಚ್ ವಿ ಬಸವರಾಜ ಅವಂಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.