ಬಸ್ ಅಪಘಾತ ೧೯ ಮಂದಿ ಸಾವು

ಮೆಕ್ಸಿಕೋ, ನ.೨೭-ಮಧ್ಯ ಮೆಕ್ಸಿಕೋದ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಸ್ ಭೀಕರ ಅಪಘಾತಕ್ಕೀಡಾಗಿ ಬರೋಬ್ಬರಿ ೧೯ ಮಂದಿ ಕೊನೆಯುಸಿರೆಳೆದಿರುವ ದುರ್ಘಟನೆ ಸಂಭವಿಸಿದೆ.
ಬಸ್ ಮನೆಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ೧೯ ಮಂದಿ ಸಾವನ್ನಪ್ಪಿದ್ದು, ೩೨ ಮಂದಿ ಗಾಯಗೊಂಡಿರುವ ಘಟನೆ ನಿನ್ನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಕ್ಸಿಕೋ ರಾಜ್ಯದ ಸ್ಥಳೀಯ ಧಾರ್ಮಿಕ ಮಂದಿರಕ್ಕೆ ತೆರಳುತ್ತಿದ್ದ ಬಸ್‌ನ ಬ್ರೇಕ್
ವಿಫಲವಾಗಿ ನಿಯಂತ್ರಣ ತಪ್ಪಿ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸಹಾಯಕ ರಾಜ್ಯ ಆಂತರಿಕ ಕಾರ್ಯದರ್ಶಿ ರಿಕಾರ್ಡೊ ಡೆ ಲಾ ಕ್ರೂಜ್ ಮುಸಲೆಮ್, ಸದ್ಯ ಗಾಯಾಳುಗಳನ್ನು ವಿಮಾನದ ಮೂಲಕ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ.೧೦ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ ಎಂದರು.