ಬಸ್ಸು ತಂಗುದಾಣದ ಪಿಲ್ಲರಗಳಿಗೆ ತುಕ್ಕು


ಸಂಜೆವಾಣಿ ವಾರ್ತೆ
ಕೊಟ್ಟೂರು, ಆ.10: ಪಟ್ಟಣದ ಗಾಂಧಿ ವೃತದ ಬಿಡಿಸಿಸಿ ಬ್ಯಾಂಕ್ ಮುಂಭಾಗದ ಹತ್ತಿರ ಇರುವ ಬಸ್ ತಂಗುದಾಣದ ಮೇಲ್ಚಾವಣೆ ಮತ್ತು ನಾಲ್ಕು ಪಿಲ್ಲರ್ ಗಳು ಕೊಳೆತು ಹೋಗಿ ತುಂಬಾನೇ ಅಪಾಯ ಮನೆ ಮಾಡಿದೆ ಇದರಿಂದಾಗಿ ಈ ನಿಲ್ದಾಣದಲ್ಲಿ ಪ್ರಯಾಣಿಕರು ನಿಲ್ಲಲು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಭಾಗದಲ್ಲಿ ದೇವಸ್ಥಾನ ದರ್ಶನಕ್ಕೆ ಬರುವ ಪ್ರಯಾಣಿಕರು ಹಾಗೂ ಕಾಲೇಜ್ ವಿದ್ಯಾರ್ಥಿಗಳು ಮಳೆ ಬಿಸಿಲು ಗಾಳಿ ಹೆಚ್ಚಿರುವಾಗ ಈ ಚಾವಣೆಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು ಈಗ ಹದೆಗೆಟ್ಟಿರುವ ಕಾರಣ ಪ್ರಯಾಣಿಕರಿಗೆ ನಿಲ್ಲಲು ಆಸರೆ ಇಲ್ಲದಂತೆ ಆಗಿದೆ.
ಪ್ರಯಾಣಿಕರು ಬಸ್ ಬರುವವರೆಗೆ ಮರ, ಬ್ಯಾಂಕ್, ಅಂಗಡಿ ಮುಗ್ಗಟ್ಟುಗಳಲ್ಲಿ ಆಸರೆ ಪಡೆದು ನಿಲ್ಲುವ ವ್ಯವಸ್ಥೆ ಉಂಟಾಗಿದೆ ಒಂದು ವೇಳೆ ಇದನ್ನು ಗಮನಿಸದೆ ಪ್ರಯಾಣಿಕರು ಮಳೆ, ಗಾಳಿ, ಹೆಚ್ಚಾಗಿರುವಾಗ ಈ ತಂಗುದಾಣದಲ್ಲಿ ಆಸರೆ ಪಡೆಯಲು ಬಂದು ನಿಂತರೆ ಖಂಡಿತ ಪ್ರಾಣಕ್ಕೆ ಕುತ್ತು ಬರುವುದರಲ್ಲಿ ಯಾವುದೇ ಸಂಶಯವಿಲ್ಲ
ಬಸ್ಸು ತಂಗುದಾಣ ನಾಲ್ಕು ಪಿಲ್ಲರು ಗಳು ಸಂಪೂರ್ಣ ಕೊಳೆತು ಪ್ರಯಾಣಿಕರಿಗೆ ಜೀವಕ್ಕೆ ಆಪಾಯ ತರುವ ಮುನ್ನ ಸಂಬಂಧ ಪಟ್ಟ ಅಧಿಕಾರಿಗಳು ಬೇಗ ಎಚ್ಚರಗೊಂಡು ಇದನ್ನು ಸರಿಪಡಿಸಬೇಕು ಎಂದು ಸಾರ್ವಜನಿಕರ ಒತ್ತಾಯ ವಾಗಿದೆ
ಈ ತಂಗುದಾಣದ ಪಿಲ್ಲರ್ ಗಳು ಸುಮಾರು ದಿನಗಳಿಂದ ಕೊಳೆತು ಹೋಗಿವೆ ಪ್ರಯಾಣಿಕರು ಗೊತ್ತಿಲ್ಲದಂತೆ ಚಿಕ್ಕ ಚಿಕ್ಕ ಮಕ್ಕಳ ಜೊತೆ ಬಂದು ಕುಳಿತುಕೊಳ್ಳುತ್ತಾರೆ ಮಳೆ, ಗಾಳಿಗೆ ಈ ಪಿಲ್ಲರ್ ಗಳು ಯಾವಾಗ ಮುರಿದು ಬೀಳುತ್ತೆ ಗೊತ್ತಿಲ್ಲ ಈ ಚಾವಣಿಯು ಪ್ರಯಾಣಿಕರ ಮೇಲೆ ಮುರಿದು ಬಿದ್ದರೆ ಖಂಡಿತ ಜೀವಕ್ಕೆ ಅಪಾಯ ತಪ್ಪಿದ್ದಲ್ಲ ಮುಂದೆ ಏನಾದರೂ ಅನಾಹುತ ಆಗುವುದಕ್ಕೂ ಮುಂಚೆ ಅಧಿಕಾರಿಗಳು ಎಚ್ಚೆತ್ತುಕೊಂಡು ಇದನ್ನು ಸರಿಪಡಿಸಬೇಕು
ಆರ್. ಶ್ರೀನಿವಾಸ್
ಡಿಎಸ್ಎಸ್ ತಾಲೂಕು ಸಂಚಾಲಕರು