ಬಸ್ಸಿನ ದರದಲ್ಲಿ ವ್ಯತ್ತಾಸ ಪ್ರಯಾಣಿಕರ ಗೋಳಾಟ

ವಿಜಯಪುರ, ಜು.19-ಪ್ರಯಾಣದಲ್ಲಿ 18 ಕಿ.ಮೀ ಅಂತರವಿದ್ದರೂ ಒಂದೇ ದರ ಏಕೆ, ವಿದ್ಯಾರ್ಥಿಗಳ ಪಾಸ ಇದ್ದರು ಅವರನ್ನು ಬಸ್ಸಿನಲ್ಲಿ ಹತ್ತಿಸಿಕೊಳ್ಳದಿರುವ ಘಟನೆಗಳು ನಡೆದಿವೆ, ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆ ಉಂಟಾಗುತ್ತಿವೆ, ಇದಕ್ಕೆ ಶೀಘ್ರ ಪರಿಹಾರ ಒದಗಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ವಿಜಯಪುರ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಾಧಿಕಾರಿಗಳಿಗೆ ಮನವಿ ನೀಡಿ ಅತೀ ಶೀಘ್ರವಾಗಿ ಸಮಸ್ಯೆ ಬಗೆ ಹರೆಸಿ ಎಂದು ಆಗ್ರಹಿಸಿದರು.
ತೆಲಸಂಗದಿಂದ ತಿಕೋಟಾದವರೆಗೆ 22 ಕಿ.ಮೀ ದೂರವಿದ್ದು 28 ರೂಪಾಯಿ ಪ್ರಯಾಣ ದರವಿದೆ, ಅದೇ ಹೊನವಾಡದಿಂದ ತಿಕೋಟಾದವರೆಗೆ 10 ಕಿ.ಮೀಟರಕ್ಕಿಂತ ಕಡಿಮೆ ದೂರವಿದ್ದು ಅದಕ್ಕೂ 28 ಪ್ರಯಾಣ ದರವಿದೆ. ಯಾಕೆ ಈ ತಾರತಮ್ಯ, 18 ಕಿ.ಮೀ ಅಂತರವಿದ್ದರೂ ಒಂದೇ ದರ ಏಕೆ ಎನ್ನುವುದು ಜನ ಸಾಮಾನ್ಯರ ಪ್ರಶ್ನೆಯಾಗಿದೆ ಇದರಿಂಧ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಗಳಾಗುತ್ತಿವೆ, ಇದಕ್ಕೆ ಸಂಬಂದಿಸಿದ ಅಧಿಕಾರಿಗಳು ಆದಷ್ಟು ಬೇಗ ಸೂಕ್ತ ಪರಿಹಾರ ಒದಗಿಸಬೇಕು ಎನ್ನುವುದು ಆಗ್ರಹವಾಗಿದೆ.
ವೇಳೆ ಜಿಲ್ಲಾ ಸಂಚಾಲಕರಾದ ನಜೀರ ಹೊನವಾಡ, ಕಾರ್ಯದರ್ಶಿಗಳಾದ ಶಾನೂರ ನಂದರಗಿ, ನೀಸಾರ ನಂದರಗಿ, ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿಪರಿದ್ದರು.