ಬಸ್ಸಿನ ಅನುಸೂಚಿ ಸರತಿಗಳ ಸಮಯದಲ್ಲಿ ಬದಲಾವಣೆ:ಸಾರ್ವಜನಿಕ ಪ್ರಯಾಣಿಕರು ಇದಕ್ಕೆ ಸಹಕರಿಸಲು ಸೂಚನೆ

ಕಲಬುರಗಿ,ಜೂ.19:“ಶಕ್ತಿ ಯೋಜನೆ” ಯಡಿ ರಾಜ್ಯದ ಎಲ್ಲಾ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ಪ್ರಯುಕ್ತ ದಿನದಿಂದ ದಿನಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

  ಸಾರಿಗೆ ಸೌಲಭ್ಯ ಕೂಡಾ ಹೆಚ್ಚಿಸುವ ದೃಷ್ಠಿಯಿಂದ ಲಭ್ಯತೆಯ ಕೆಲವು ಅನುಸೂಚಿಗಳಲ್ಲಿ, ಸರತಿ ಸಂಖ್ಯೆಗಳು ಕೂಡಾ ಹೆಚ್ಚಿಸಲಾಗುತ್ತಿದೆ.  ಅನುಸೂಚಿ ಸರತಿಗಳ ಸಮಯದಲ್ಲಿ ಕೆಲ ಬದಲಾವಣೆಯಾಗುತ್ತಿದ್ದು, ಸಾರ್ವಜನಿಕ ಪ್ರಯಾಣಿಕರು ಇದಕ್ಕೆ ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ.