ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶ

ಚಾಮರಾಜನಗರ, ಏ.28:- ಖಾಸಗಿ ಬಸ್‍ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 22,925ರೂ. ಮೌಲ್ಯದ 59.250 ಲೀಟರ್ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬುಧವಾರ ರಾತ್ರಿ 10 ಗಂಟೆ ಸಮಯದಲ್ಲಿ ಕೊಳ್ಳೇಗಾಲ ಪಟ್ಟಣದಲ್ಲಿ ವಶಪಡಿಸಿಕೊಂಡಿದ್ದಾರೆ.
ಗಸ್ತು ಕಾರ್ಯನಡೆಸುತ್ತಿದ್ದ ವೇಳೆ ಖಾಸಗಿ ಬಸ್‍ವೊಂದರಲ್ಲಿ (ನೋಂದಣಿ ಸಂಖ್ಯೆ: ಕೆಎ: 55: 5045) ಅಕ್ರಮವಾಗಿ ಮದ್ಯವನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಪಟ್ಟಣದ ಮಾದೇಗೌಡ ಪೆಟ್ರೋಲ್ ಬಂಕ್ ಬಳಿ ಬಸ್ಸನ್ನು ತಡೆದು ನಿಲ್ಲಿಸಿ ಶೋಧನೆ ಮಾಡಲಾಯಿತು. ಈ ಸಂದರ್ಭದಲ್ಲಿ 59.250 ಲೀಟರ್ ಮದ್ಯವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದುದ್ದುಕಂಡುಬಂತು.
ಬಸ್ಸಿನ ಚಾಲಕ ಸೆಲ್ವಕುಮಾರ್ ಹಾಗೂ ಬಸ್ ನಿರ್ವಾಹಕಕೆ. ರಾಜಕುಮಾರ್ ಎಂಬುವವರನ್ನು ದಸ್ತಗಿರಿ ಮಾಡಿ ಮದ್ಯ ಹಾಗೂ ವಾಹನವನ್ನು ವ±ಕ್ಕೆ ತೆಗೆದುಕೊಳ್ಳಲಾಯಿತು. ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮದ್ಯದ ಮೌಲ್ಯ 22,925ರೂ. ಹಾಗೂ ವಾಹನದ ಮೌಲ್ಯ50 ಲಕ್ಷ ರೂ.ಗಳಾಗಿದ್ದು ಒಟ್ಟು ಮೌಲ್ಯ5,022,925 ರೂ.ಗಳಾಗಿವೆ ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.